ಪುರಸಭೆ-ಮುಜರಾಯಿ ತಿಕ್ಕಾಟ: ಸೊರಗಿದ ಐತಿಹಾಸಿಕ ಕಲ್ಯಾಣಿ

ಪುರಸಭೆ-ಮುಜರಾಯಿ ತಿಕ್ಕಾಟ: ಸೊರಗಿದ ಐತಿಹಾಸಿಕ ಕಲ್ಯಾಣಿ

ಬೆಂಗಳೂರು, ಏ. 29, ನ್ಯೂಸ್ ಎಕ್ಸ್ ಪ್ರೆಸ್:  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ನಿರ್ಮಾಣಗೊಂಡಿದ್ದ ಐತಿಹಾಸಿಕ ಕಲ್ಯಾಣಿ ಇದೀಗ ನಿರ್ವಹಣೆ ಇಲ್ಲದೆ ನಶಿಸಿ ಹೋಗುತ್ತಿದೆ. ಈ ಕಲ್ಯಾಣಿಗಳನ್ನು ಅಭಿವೃದ್ಧಿ ಪಡಿಸಬೇಕಾದ ಮುಜರಾಯಿ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ಪರಸ್ಪರ ಆರೋಪ ಮಾಡಿಕೊಂಡು ಕಲ್ಯಾಣಿಯ ಅವನತಿಗೆ ಕಾರಣರಾಗುತ್ತಿದ್ದಾರೆ.  ಒಂದೆಡಡೆ‌ ಮುಜರಾಯಿ ಇಲಾಖೆ, ಮತ್ತೊಂದು ಕಡೆ ಪುರಸಭೆ. ಈ ಎರಡರ ನಡುವಿನ ಜಟಾಪಟಿಯಿಂದ ಐತಿಹಾಸಿಕ ಕಲ್ಯಾಣಿಗಳು ಅವನತಿಯತ್ತ ಸಾಗುತ್ತಿವೆ. ರಾಜರ ಕಾಲದಲ್ಲಿ, ಪಾಳೇಗಾರ ಆಡಳಿತದಲ್ಲಿ ಪ್ರತಿ ಗ್ರಾಮದ ಹೊರವಲಯದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಕಲ್ಯಾಣಿಗಳನ್ನು ನಿರ್ಮಿಸಿದ್ದರು. ಇಂತಹ ನೂರಾರು ವರ್ಷಗಳ ಇತಿಹಾಸವಿರುವ ಕಲ್ಯಾಣಿಗಳು ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ಹಲವು ಕಡೆಗಳಲ್ಲಿ ಸಂಪೂರ್ಣವಾಗಿ ನೆಲಕಚ್ಚಿವೆ. ಇದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ನಿರ್ಮಾಣವಾಗಿದ್ದ ಐತಿಹಾಸಿಕ ಕಲ್ಯಾಣಿ ಇದೀಗ ನಿರ್ವಹಣೆ ಇಲ್ಲದೆ ನಶಿಸಿ ಹೋಗುತ್ತಿದೆ. ಈ ಕಲ್ಯಾಣಿಗಳನ್ನು ಅಭಿವೃದ್ಧಿ ಪಡಿಸಬೇಕಾದ ಮುಜರಾಯಿ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಂಡು ಕಲ್ಯಾಣಿಯ ಅವನತಿಗೆ ಕಾರಣರಾಗುತ್ತಿದ್ದಾರೆ. ಈ ಇತಿಹಾಸಿಕ ಕಲ್ಯಾಣಿಗಳು 20 ರಿಂದ 30ಅಡಿ ಆಳವಿದ್ದು, ಅಷ್ಟೇ ಅಡಿಗಳಷ್ಟು ಅಗಲ ಇವೆ. ಕಲ್ಲುಗಳಿಂದ ಕಟ್ಟಿರುವ ಈ ಕಲ್ಯಾಣಿಯಲ್ಲಿ ಜನ ಮತ್ತು ಜಾನುವಾರುಗಳು ಏರಿ ಇಳಿಯಲು ಮೆಟ್ಟಿಲುಗಳನ್ನು ನಿರ್ಮಿಲಾಗಿದೆ. ಹಿಂದಿನ ಕಾಲದಲ್ಲಿ ಊರಿಂದ ಊರಿಗೆ ಪ್ರಯಾಣ ಮಾಡುವ ಗ್ರಾಮಸ್ಥರು ಮತ್ತು ಹೊಸಬರು ಬಾಯಾರಿಕೆ ಹಾಗೂ ಊಟ ಮಾಡಲು ಈ ನೀರನ್ನು ಬಳಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಕಲ್ಯಾಣಿಗಳ ನಿರ್ವಹಣೆ ಅವು ಮಾಡದೆ ನಶಿಸುವ ಸ್ಥಿತಿಗೆ ತಲುಪಿವೆ.

ಫ್ರೆಶ್ ನ್ಯೂಸ್

Latest Posts

Featured Videos