‘ಪುಣ್ಯಕೋಟಿ’ಯಾಗಲು ಹೊರಟ ರಕ್ಷಿತ್ ಶೆಟ್ಟಿ

‘ಪುಣ್ಯಕೋಟಿ’ಯಾಗಲು ಹೊರಟ ರಕ್ಷಿತ್ ಶೆಟ್ಟಿ

ಬೆಂಗಳೂರು, . 20, ನ್ಯೂಸ್ ಎಕ್ಸ್ ಪ್ರೆಸ್: ಕನ್ನಡ ಚಿತ್ರರಂಗದ ಖ್ಯಾತ ನಟ  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ ‘777 ಚಾರ್ಲಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ತೆರೆಗೆ ಬರುವ ಮುನ್ನವೇ ಅವರು ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ವಿಶೇಷವೆಂದರೆ, ಈ ಚಿತ್ರವನ್ನು ಅವರೇ ನಿರ್ದೇಶನ ಮಾಡಲಿದ್ದಾರೆ.

ಹೌದು, ರಕ್ಷಿತ್ ಶೆಟ್ಟಿ ಪುನಃ ಡೈರೆಕ್ಟರ್ ಕ್ಯಾಪ್ ಧರಿಸುತ್ತಿದ್ದು, ‘ಉಳಿದವರು ಕಂಡಂತೆ’ ಚಿತ್ರದಂತೆಯೇ ಇದೊಂದು ಸಹ ಪ್ರಯೋಗಾತ್ಮಕ ಚಿತ್ರವಾಗಿದೆ. ಚಿತ್ರಕ್ಕೆ ‘ಪುಣ್ಯಕೋಟಿ’ ಎಂದು ಹೆಸರಿಟ್ಟಿದ್ದು, ಹೆಸರಿಗೆ ತಕ್ಕಂತೆ ಇದೊಂದು ಜಾನಪದ ಕಥೆಯನ್ನು ಒಳಗೊಂಡಿದೆ.

ಈ ಚಿತ್ರದಲ್ಲಿ ರಕ್ಷಿತ್ ಅವರು ಹಸು ಮತ್ತು ಹಸಿದ ಹುಲಿಯನ್ನು ವ್ಯಕ್ತಿಗಳಿಗೆ ಹೋಲಿಸಿ ಕಥೆಯನ್ನು ಮಾಡಿದ್ದು, ಮುಂದಿನ ವರ್ಷ ಸೆಟ್ಟೇರಲಿದೆ.

ಫ್ರೆಶ್ ನ್ಯೂಸ್

Latest Posts

Featured Videos