ಅಭಿಮಾನಿಗಳಿಗೆ ಬೇಸರ ಮೂಡಿಸಿದ ಪುನೀತ್

ಬೆಂಗಳೂರು, ಮಾ.15, ನ್ಯೂಸ್ ಎಕ್ಸ್ ಪ್ರೆಸ್: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮ ಅಭಿಮಾನಿಗಳಿಗೆ ಬೇಸರ ಸುದ್ದಿಯೊಂದಿಗೆ ಮಹತ್ವದ ವಿಷಯ ತಿಳಿಸಿದ್ದಾರೆ.

ಮಾರ್ಚ್ 17ರಂದು ಪುನೀತ್ ರಾಜ್‍ಕುಮಾರ್ ಅವರಿಗೆ 43ನೇ ಹುಟ್ಟುಹಬ್ಬದ ಸಂಭ್ರಮ. ಪುನೀತ್ ತಮ್ಮ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ತಮ್ಮ ಟ್ವಿಟ್ಟರಿನಲ್ಲಿ ಒಂದು ವಿಡಿಯೋ ಹಾಕಿ ಅಭಿಮಾನಿಗಳ ಜೊತೆ ಮನವಿ ಮಾಡಿದ್ದಾರೆ.

ಎಲ್ಲರಿಗೂ ನಮಸ್ಕಾರ. ಮಾರ್ಚ್ 16ರ ರಾತ್ರಿ ನಾನು ಊರಿನಲ್ಲಿ ಇರುವುದಿಲ್ಲ. 17ನೇ ತಾರೀಕು ಬೆಳಗ್ಗೆ ಬರುತ್ತಿದ್ದೇನೆ. ಹಾಗಾಗಿ ದಯವಿಟ್ಟು ಯಾರೂ ಮನೆ ಹತ್ತಿರ ಬರಲು ಹೋಗಬೇಡಿ ಏಕೆಂದರೆ ನಾನು ಊರಿನಲ್ಲಿ ಇರುವುದಿಲ್ಲ. ಹಾರ, ಕೇಕ್ ಹಾಗೂ ಹೂಗುಚ್ಚ ಅದನ್ನೆಲ್ಲಾ ತರಬೇಡಿ. ಏಕೆಂದರೆ ನೀವು ನಿಮ್ಮ ಪ್ರೀತಿ, ವಿಶ್ವಾಸದಿಂದ ಹಣ ಖರ್ಚು ಮಾಡಿ ತಂದಿರುತ್ತೀರಿ. ಆದರೆ ನೀವು ಇಲ್ಲಿ ಬಂದಾಗ ಅದು ನನಗೆ ಸೇರುತ್ತೊ, ಅಲ್ಲಿ ಇಲ್ಲಿ ಹಾರಾಡುತ್ತೋ ಗೊತ್ತಿಲ್ಲ. ಇದರಿಂದ ನೀವು ಬೇಸರ ಆಗುವುದು ಬೇಡ ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos