ಪುನೀತ್, ದಿಗಂತ್ ಗೆ ಸವಾಲ್

ಪುನೀತ್, ದಿಗಂತ್ ಗೆ ಸವಾಲ್

ಬೆಂಗಳೂರು, ಡಿ. 19 : ಅವನೇ ಶ್ರೀ ಮನ್ನಾ ರಾಯಣ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿರುವ ನಟ ರಕ್ಷಿತ್ ಶೆಟ್ಟಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ದಿಗಂತ್, ಸಂಯುಕ್ತ ಹೆಗ್ಡೆ ಮತ್ತು ಇಮ್ರಾನ್ ಸರ್ದಾರಿಯಾಗೆ ಹೊಸ ಸವಾಲು ಕೊಟ್ಟಿದ್ದಾರೆ.
ಅವನೇ ಶ್ರೀಮನ್ನಾರಾಯಣ ಸಿನಿಮಾದ ಹ್ಯಾಂಡ್ಸಪ್ ಹಾಡಿನ ಸ್ಟೆಪ್ ಈಗ ವೈರಲ್ ಆಗಿದ್ದು, ಈ ಹಾಡಿನ ಸಿಗ್ನೇಚರ್ ಸ್ಟೆಪ್ ನ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೀಗ ರಕ್ಷಿತ್ ಶೆಟ್ಟಿ ಈ ಸಿಗ್ನೇಚರ್ ಸ್ಟೆಪ್ ಮಾಡುವುದನ್ನು ವಿಡಿಯೋ ಮಾಡಿ ಪವರ್ ಸ್ಟಾರ್ ಪುನೀತ್, ಇಮ್ರಾನ್ ಸರ್ದಾರಿಯಾ, ಸಂಯುಕ್ತಾ ಹೆಗಡೆ ಮತ್ತು ದಿಗಂತ್ ಮಂಚಾಲೆಗೆ ಈ ಚಾಲೆಂಜ್ ನೀಡಿದ್ದಾರೆ. ಇವರ ಪೈಕಿ ಇಮ್ರಾನ್ ಸರ್ದಾರಿಯಾ ಮಾತ್ರ ಸವಾಲು ಸ್ವೀಕರಿಸಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವಾಗ ಈ ಸ್ಟೆಪ್ ಹಾಕಿರುವ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ. ಉಳಿದವರು ರಕ್ಷಿತ್ ಸವಾಲಿಗೆ ಇನ್ನಷ್ಟೇ ಉತ್ತರಿಸಬೇಕಿದೆ.

ಫ್ರೆಶ್ ನ್ಯೂಸ್

Latest Posts

Featured Videos