ಪುಲ್ವಾಮ ಸಂಚುಕೋರನ ಹತ್ಯೆ

ಪುಲ್ವಾಮ ಸಂಚುಕೋರನ ಹತ್ಯೆ

ಶ್ರೀನಗರ, ಜು. 31 : 2018ರಲ್ಲಿ ಉಗ್ರ ಸಂಘಟನೆ ಸೇರಿದ್ದ ಪಂಝೊ, ಕಣಿವೆ ರಾಜ್ಯದಲ್ಲಿ ಸಿಆರ್ಪಿಎಫ್ ಯೋಧರನ್ನು ಗುರಿಯಾಗಿಟ್ಟುಕೊಂಡು ಹಲವು ದಾಳಿಗಳನ್ನು ಸಂಘಟಿಸಿದ್ದ. ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ 40 ಯೋಧರ ಬಲಿ ಪಡೆದ ಉಗ್ರ ದಾಳಿ ಸಂಚುಕೋರ ಹಾಗೂ ಆತನ ಸಹಚರ ಭದ್ರತಾ ಪಡೆಗಳು ಮಂಗಳವಾರ ಗುಂಡಿಕ್ಕಿ ಹತ್ಯೆಗೈದಿವೆ. ”ಅನಂತನಾಗ್ ಜಿಲ್ಲೆಯ ಬಿಜ್ಬೇಹರದಲ್ಲಿ ನಡೆದ ಎನ್ಕೌಂಟರ್ನಲ್ಲಿ ಜೈಷೆ ಮೊಹಮ್ಮದ್ ಸಂಘಟನೆಯ ಸ್ವಯಂ ಘೋಷಿತ ಕಮಾಂಡರ್ ಹಾಗೂ ಪುಲ್ವಾಮ ದಾಳಿಯ ಸಂಚುಕೋರ ಫಯಾಜ್ ಪಂಝೊ ಹತನಾಗಿದ್ದಾನೆ. ಆತನ ಸಹಚರ ಕೂಡ ಕೊಂದು ಹಾಕಲಾಗಿದೆ,” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos