ಪುಲ್ವಾಮಾದಲ್ಲಿ ನಡೆದದ್ದು ‘ದುರ್ಘಟನೆ’: ಯುಪಿ ಡಿಸಿಎಂ

ಪುಲ್ವಾಮಾದಲ್ಲಿ ನಡೆದದ್ದು ‘ದುರ್ಘಟನೆ’: ಯುಪಿ ಡಿಸಿಎಂ

ನವದೆಹಲಿ, ಮಾ.6, ನ್ಯೂಸ್ಎಕ್ಸ್ ಪ್ರೆಸ್‍:  ‘ಪುಲ್ವಾಮಾದಲ್ಲಿ ನಡೆದದ್ದು ದುರ್ಘಟನೆ’ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಕೇಶವ ಪ್ರಸಾದ್ ಮೌರ್ಯ ಹೇಳಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪುಲ್ವಾಮಾ ದಾಳಿಯನ್ನು ‘ದುರ್ಘಟನೆ (ಅಪಘಾತ ಎಂಬರ್ಥದಲ್ಲಿ)’ ಎಂಬ ಶಬ್ದ ಬಳಸಿ ಟ್ವೀಟ್ ಮಾಡಿದ್ದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಮಂಗಳವಾರ ಆಕ್ರೋಶಕ್ಕೆ ಗುರಿಯಾಗಿದ್ದರು.

ಕೇಂದ್ರದ ಹಲವು ಸಚಿವರು ಮತ್ತು ಬಿಜೆಪಿ ಬೆಂಬಲಿಗರು ನೇರವಾಗಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಮೌರ್ಯ ಅವರ ಹೇಳಿಕೆ ಉಲ್ಲೇಖಿಸಿ ಟ್ವೀಟ್ ಮಾಡಿರುವ ದಿಗ್ವಿಜಯ್ ಸಿಂಗ್, ಮೋದಿ ಹಾಗೂ ಕೇಂದ್ರ ಸಚಿವರಿಗೆ ಸವಾಲು ಹಾಕಿದ್ದಾರೆ.

‘ಪುಲ್ವಾಮಾ ದಾಳಿಯನ್ನು ‘ದುರ್ಘಟನೆ’ ಎಂದು ಕರೆದಾಗ ಮೂವರು ಕೇಂದ್ರ ಸಚಿವರು ನನ್ನನ್ನು ಪಾಕಿಸ್ತಾನದ ಬೆಂಬಲಿಗ ಎಂದು ಬಿಂಬಿಸಿದರು.

ಈಗ ಕೇಶವ ಪ್ರಸಾದ್ ಮೌರ್ಯ ಅವರ ಈ ಹೇಳಿಕೆಯನ್ನು ಕೇಳಿ. ಮೋದಿ ಜೀ ಮತ್ತು ಅವರ ಸಂಪುಟ ಸಚಿವರಿಂದ ಏನಾದರೂ ಪ್ರತಿಕ್ರಿಯೆಗಳಿವೆಯೇ?’ ಎಂದು ದಿಗ್ವಿಜಯ್ ಟ್ವೀಟ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos