ಪುಲ್ವಾಮಾದಲ್ಲಿ 4 ಜನ ಉಗ್ರರ ಹತ್ಯೆ

ಪುಲ್ವಾಮಾದಲ್ಲಿ 4 ಜನ ಉಗ್ರರ ಹತ್ಯೆ

ಶ್ರೀನಗರ, ಏ. 1, ನ್ಯೂಸ್ ಎಕ್ಸ್ ಪ್ರೆಸ್:  ಜಮ್ಮು ಮತ್ತು ಕಾಶ್ಮೀರದ ಪುಲ್ವಮಾದಲ್ಲಿ ಭದ್ರತಾ ಪಡೆ ಇಂದು ನಡೆಸಿದ ಕಾರ್ಯಾಚರಣೆಉಲ್ಲಿ 4 ಉಗ್ರರರನ್ನು ಹೊಡೆದುರುಳಿಸಿದ್ದಾರೆ. ಈ ಸಂದರ್ಭದಲ್ಲಿ 4 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ಭದ್ರತಾ ಪಡೆಯ ಗುಂಡಿಗೆ ಬಲಿಯಾದವರು ಲಷ್ಕರ್ ಸಂಘಟನೆಗೆ ಸೇರಿದ ಉಗ್ರರು ಎಂದು ಮೂಲಗಳು ತಿಳಿಸಿವೆ.

ಕಾರ್ಯಾಚರಣೆ ಮುಂದುವರಿದಿದ್ದು, ಮೃತಪಟ್ಟ ಉಗ್ರರಿಂದ 4 ರೈಫಲ್ ಗಳು ಹಾಗೂ ಇತರೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos