ಅಪರಾಧ ತಡೆಯಲು ಸಾರ್ವಜನಿಕರು ಸಹಕರಿಸಬೇಕು: ಡಿವೈಎಸ್ ಪಿ ರಂಗಪ್ಪ

ಅಪರಾಧ ತಡೆಯಲು ಸಾರ್ವಜನಿಕರು ಸಹಕರಿಸಬೇಕು: ಡಿವೈಎಸ್ ಪಿ ರಂಗಪ್ಪ

ದೇವನಹಳ್ಳಿ, ನ. 08: ಪೋಲೀಸ್ ಇಲಾಖೆಯೊಂದಿಗೆ ಅಪರಾಧ ಚಟುವಟಿಕೆ ತಡೆಯಲು ಸಕ್ರಿಯವಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ಡಿವೈಎಸ್ ಪಿ ರಂಗಪ್ಪ ತಿಳಿಸಿದರು.

ತಾಲೂಕಿನ ಚನ್ನರಾಯ ಪಟ್ಟಣ ಪೋಲೀಸ್ ಠಾಣೆಯ ಆವರಣದಲ್ಲಿ ಚನ್ನರಾಯ ಪಟ್ಟಣ ಪೋಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು. ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಜನರು ಠಾಣೆಗೆ ಬಂದು ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡದಿದ್ದರೆ ಕಡಿವಾಣ ವಿಳಂಬವಾಗುವುದು. ಜನ ಸಂಪರ್ಕ ಸಭೆ ಮಾಡುವುದರ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡು ಕೊಳ್ಳಲು ಅನುಕೂಲವಾಗುವುದು. ಪ್ರತಿ ಗ್ರಾಮದಲ್ಲೂ ಶಾಂತಿ ಸುವ್ಯವಸ್ಥೆ ಕಾಪಾಡುವುದೇ ಮುಖ್ಯ ಉದ್ದೇಶವಾಗಿದೆ. ಕಾನೂನು ಸುವ್ಯವಸ್ಥೆ ಪೋಲೀಸರ ಜವಾಬ್ದಾರಿ. ಆದರೂ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಸಹಿಸಲು ಸಾಧ್ಯವಿಲ್ಲ ಎಂದರು.

ಮಹಿಳೆಯರು, ವೃದ್ಧರು, ಯುವತಿಯರು ಸಮಸ್ಯೆ ಇದ್ದಲ್ಲಿ ನಿರ್ಭಯವಾಗಿ ಪೋಲೀಸ್ ಠಾಣೆಗೆ ಬಂದು ಸಲ್ಲಿಸಬೇಕು. ಎಲ್ಲಾ ಠಾಣೆಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಮಾಹಿಸಿ ಪಡೆಯಬೇಕು. ಅಪರಾಧ ಚಟುವಟಿಕೆಗಳಿಗೆ ಯುವ ಸಮುದಾಯ ಪಾಲ್ಗೊಳ್ಳಬಾರದು. ವಿವಿಧ ಠಾಣೆಗಳಲ್ಲಿ ಇರುವ ರೌಡಿ ಶೀಟರ್ ಗಳು ತಮ್ಮ ಭವಿಷ್ಯದ ಬಗ್ಗೆ ಯೋಚಿಸಿಬೇಕು. ಜೊತೆಗೆ ಅಪರಾಧ ಚಟುವಟಿಕೆಗಳು ಮರುಕಳಿಸಬಾದರು. ನ್ಯಾಯಯುತ ಬದುಕಿಗೆ ಇಲಾಖೆಯು ಅನುವು ಮಾಡಿಕೊಡುತ್ತಿದೆ. ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇದರಿಂದ ಅಪಘಾತದಲ್ಲಿ ಜೀವ ಉಳಿಯುವುದು. ವಾಹನ ಸವಾರರು ಸರಿಯಾದ ವಾಹನದ ದಾಖಲೆಗಳನ್ನು ಇಟ್ಟುಕೊಂಡು ಚಲಾಯಿಸಬೇಕು. ಗ್ರಾಮೀಣ ಭಾಗದಲ್ಲಿ ಕೆಲವರು ವಾಹನ ಪರವಾನಿಗೆ  ಮಾಡಿಸುತ್ತಿಲ್ಲ. ಅಪಘಾತ ಸಂಭವಿಸಿದಾಗ ಸೂಕ್ತ ದಾಖಲೆಗಳು ಇದ್ದರೆ ಪರದಾಡುವ ಸ್ಥಿತಿ ಬರುವುದಿಲ್ಲ ಎಂದು ಹೇಳಿದರು.

ಚನ್ನರಾಯ ಪಟ್ಟಣ ಪೋಲೀಸ್ ಠಾಣೆಯ ಪಿಎಸ್ ಐ ನಂದೀಶ್ ಮಾತನಾಡಿ, ಅಪರಿಚಿತ ವ್ಯಕ್ತಿಗಳು ಮನೆ ಬಾಡಿಗೆ ಬಂದಾಗ ಕೂಡಲೇ ಪೋಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅಪರಿಚಿತ ವ್ಯಕ್ತಿಗಳು ಒಡವೆ ಪಾಲೀಷ್, ಇನ್ನಿತರೆ ವಿಚಾರಗಳನ್ನು ಕೇಳಿಕೊಂಡು ಬಂದರೆ ತಕ್ಷಣ ಎಚ್ಚೆತ್ತುಕೊಂಡು ಠಾಣೆಗೆ ತಿಳಿಸಬೇಕು ಎಂದರು.

ಈ ವೇಳೆಯಲ್ಲಿ ವಿಜಯಪುರ ವೃತ್ತ ನಿರೀಕ್ಷಕ ಪ್ರಕಾಶ್, ಚನ್ನರಾಯ ಪಟ್ಟಣ ಪೋಲೀಸ್ ಠಾಣೆಯ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos