ಪಿಟಿಸಿಗೆ ಭಾರತದ ತಂತ್ರಜ್ಞಾನ ಕ್ಷೇತ್ರವನ್ನು ಪರಿವರ್ತಿಸುವ ಗುರಿ

ಪಿಟಿಸಿಗೆ ಭಾರತದ ತಂತ್ರಜ್ಞಾನ ಕ್ಷೇತ್ರವನ್ನು ಪರಿವರ್ತಿಸುವ ಗುರಿ

ಮಹದೇವಪುರ, ಡಿ. 18: ಜಗತ್ತಿನಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿದೆ, ಭಾರತದ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಡಿಜಿಟಲ್ ಕ್ಷೇತ್ರಕ್ಕೆ ನಮ್ಮ ಉತ್ಪನ್ನಗಳು ಮತ್ತು ಪರಿಹಾರಗಳು ಅಪಾರ ಮೌಲ್ಯ ಸೇರಿಸಬಲ್ಲವು ಎಂದು ಪಿಟಿಸಿ ಸಂಸ್ಥೆಯ ಅಧ್ಯಕ್ಷ ಹಾಗೂ ಸಿಇಒ ಜೇಮ್ಸ್ ಹೆಪೆಲ್ಮಾನ್ ತಿಳಿಸಿದರು.

ವೈಟ್ ಫೀಲ್ಡ್ ನ ಒಂದು ಖಾಸಗಿ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ ಸರ್ಕಾರದ `ಡಿಜಿಟಲ್ ಇಂಡಿಯಾ’ಉಪಕ್ರಮಗಳಿಗೆ ತಕ್ಕಂತೆ ಪಿಟಿಸಿ ಇತರೆ ಸಂಸ್ಥೆಗಳನ್ನು ಡಿಜಿಟಲೀ ಸ್ಮಾರ್ಟ್ ಮಾಡುವ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದು ತಿಳಿಸಿದರು.

ನವೀನತೆ ಮತ್ತು ಪ್ರಶಸ್ತಿ ವಿಜೇತ ಪರಿಹಾರಗಳಿಗೆ ಖ್ಯಾತಿ ಗಳಿಸಿರುವ ಹಾಗೂ ಜಾಗತಿಕವಾಗಿ ಗುರುತಿಸಲಾಗಿರುವ ಸಾಫ್ಟ್ವೇರ್ ಕಂಪನಿ ಪಿಟಿಸಿ ಮಾರುಕಟ್ಟೆಗಾಗಿ ತನ್ನ ಬೆಳವಣಿಗೆಯ ಯೋಜನೆಗಳನ್ನು ಪ್ರಕಟಿಸಿದೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos