ಕೆ.ಆರ್.ಪುರ ಸಂತೆ ಮಕ್ಕಳಿಂದ ಪ್ರತಿಭಟನೆ

ಕೆ.ಆರ್.ಪುರ ಸಂತೆ ಮಕ್ಕಳಿಂದ ಪ್ರತಿಭಟನೆ

ಕೆ.ಆರ್.ಪುರ, ಸೆ. 24: ರಾಜ್ಯದಲ್ಲಿ ಬರಗಾಲ ಮತ್ತು ನೆರೆ (ಅತಿವೃಷ್ಟಿ , ಅನಾವೃಷ್ಟಿ) ಬಂದು ಜನ ಸಾಮಾನ್ಯರು ಸಾವು ಬದುಕಿನ ಹೋರಾಟ ನಡೆಸುತ್ತಿರುವಾಗ ಉಪಚುಣಾವಣೆ ಅಗತ್ಯವಿತ್ತಾ ಎಂದು ಅಖಿಲ ಕರ್ನಾಟಕ ರೈತರು ಮತ್ತು ವ್ಯಾಪಾರಿಗಳ

ಒಕ್ಕೂಟದ ರಾಜ್ಯಾಧ್ಯಕ್ಷ ಎಲೆ ಶ್ರೀನಿವಾಸ್ ನೇತೃತ್ವದಲ್ಲಿ ಗೊಣಿ ಚೀಲ, ಗಾಂಧಿ ಟೋಪಿ ಧರಿಸಿ ಬಿಜೆಪಿ ಕಚೇರಿಗೆ ಪಾದಯಾತ್ರೆ  ಹಮ್ಮಿಕೊಳ್ಳಲಾಯಿತು.

ಕೆ.ಆರ್.ಪುರ ಸಂತೆ ಮಕ್ಕಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿನೂತನ

ಕಾಲ್ನಡಿ

ಗೆ ಜಾತದ ನೇತೃತ್ವವಹಿಸಿ ಮಾತನಾಡಿದ ಅವರು, ಅತಿವೃಷ್ಟಿ, ಅನಾವೃಷ್ಟಿ ಬಂದು

ಜನ ಸಾಮಾನ್ಯರು ಸಂಕಷ್ಟದಲ್ಲಿರುವಾಗ, ರಾಜ್ಯದಲ್ಲಿ ಉಪಚುಣಾವಣೆ ಆವಶ್ಯಕತೆ ಇತ್ತಾ..!

ದೇಶದಲ್ಲೆಡೆ ಹಳವಾರು ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದ್ದರೂ ಕರ್ನಾಟಕದಲ್ಲಿ ಹಠಮಾಡಿ ಕುದುರೇ ವ್ಯಾಪಾರಮಾಡಿ ರಾಜ್ಯ ಅಳುವ ಅನಿವಾರ್ಯ ಯಾಕೆ ಬಂತು ಎಂಬ ಹಲವು ಪ್ರಶ್ನೆಗಳನ್ನು ಕೇಂದ್ರ ಸರ್ಕಾರಕ್ಕೆ ಸವಾಲೆಸೆದರು.

ಇಡೀ ದೇಶದಲ್ಲಿ ಅತಿಹೆಚ್ಚು ತೆರೆಗೆ ಪಾವತಿಯಲ್ಲಿ ನಮ್ಮ ಕರ್ನಾಟಕ ಎರಡನೆಯ ಸ್ಥಾನದಲ್ಲಿ

ದೆ. ಅಲ್ಲದೆ ನಾವು ನಿಮ್ಮ ಕೈ ಬಲಪಡಿಸಲು 26 ಸಂಸದರನ್ನು ರಾಜ್ಯದಿಂದ ಆಯ್ಕೆ

ಮಾಡಿ, ಅವರಿಗೆ ರಾಜ್ಯದ ಕಷ್ಟ ನಷ್ಟಗಳು ತಿಳಿದಿದ್ದರೂ ನಿಮ್ಮ ಮುಂದೆ ಪ್ರಶ್ನೆ ಮಾಡಿ ಅನುದಾನ ಕೇಳಲು ಅಸಹಾಯಕ ರಾಗಿದ್ದಾರೆ ಎಂದು ದೂರಿದರು.

ಸಾರ್ವತ್ರಿಕ ಚುನಾವಣೆ ಸಂಧರ್ಬದಲ್ಲಿ ರಾಜ್ಯಕ್ಕೆ 19 ಬಾರಿ ಚುನಾವಣಾ ಪ್ರಚಾರಕ್ಕೆ

ಭೇಟಿ ನೀಡಿದ್ದ ನೀವು ನೆರೆ ಸಂತ್ರಸ್ತರ ಬಗ್ಗೆ ತಿಳಿಯಲು ಒಂದು ಬಾರಿಯೂ ಬರಲಿಲ್ಲ,

ಸೆಪ್ಟಂಬರ್ ಏಳರಂದು ರಾಜ್ಯಕ್ಕೆ ಬಂದ ನೀವು ಕೇವಲ ಇಸ್ರೋ (ವಿಕ್ರಮ್ ಲ್ಯಾಂಡ್ ರೋವರ್ ಚಂದ್ರಯಾನ ಪೂರ್ಣಗೊಂಡರೆ ಪತ್ರಿಕೆಗಳಿಗೆ ವಿಜ್ಞಾನಿಗಳ ಸಾಧನೆ ಎಂದು ಹೇಳಿಕೊಳ್ಳಲು)ಗೆ ಭೇಟಿ ನೀಡಿದ್ದೀರಿ,

ಆ ಸಂಧರ್ಬದಲ್ಲಿ ನೆರೆ ಸಂತ್ರಸ್ಥರು ನಿಮಗೆ ನೆನಪಾಗಲಿಲ್ಲವೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಶ್ನೆ ಮಾಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos