ಡಿಸಿಪಿ ಕಚೇರಿಯ ಮಂದೆ ಪ್ರತಿಭಟನೆ

ಡಿಸಿಪಿ ಕಚೇರಿಯ ಮಂದೆ ಪ್ರತಿಭಟನೆ

ಕೆ.ಆರ್.ಪುರ, ಅ. 16: ಅಂಗವಿಕಲ ಬಡ ರೈತ ಕೆ.ಕೃಷ್ಣಪ್ಪ ನವರಿಗೆ ಚಾಂಪಿಯನ್ ಗ್ರೂಪ್ ಬಿಲ್ಡರ್ಸ್ ಸಂಸ್ಥೆಯ ವತಿಯಿಂದ ಭೂಮಿ ವಂಚಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಿಪಬ್ಲಿಕನ್ ಸೇನೆ ಹಾಗೂ ಕರ್ನಾಟಕ ದಳಿತ ರಕ್ಷಣಾ ವೇದಿಕೆ ಕಾರ್ಯಕರ್ತರು ವೈಟ್ ಫೀಲ್ಡ್ ಡಿಸಿಪಿ ಕಚೇರಿಯ ಮಂದೆ ಪ್ರತಿಭಟನೆ ನಡೆಸಿದರು.

ವರ್ತೂರು ಪೋಲಿಸ್ ಠಾಣಾ ವ್ಯಾಪ್ತಿಯ ಮುಳ್ಳೂರು ಗ್ರಾಮದ ದಲಿತ ಕೆ . ಕೃಷ್ಣಪ್ಪರವರಿಗೆ ಸೇರಿದ ಸರ್ವೆ ನಂ 46 / 3 ರಲ್ಲಿ 02.8 ಗುಂಟೆಯನ್ನು ಚಾಂಪಿಯನ್ ಗ್ರೂಪ್ ಬಿಲ್ಡರ್ಸ್ ಸಂಸ್ಥೆಯ ವತಿಯಿಂದ ವತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಕೆ.ಆರ್.ಎಸ್ ರಾಜ್ಯಾಧ್ಯಕ್ಷ ಜಿಗಿಣಿ ಶಂಕರ್ ಪಾಲ್ಗೊಂಡು ಮಾತನಾಡಿದರು.

ಆ ಭೂಮಿಯಲ್ಲಿ ಕೆ.ಕೃಷ್ಣಪ್ಪ ನವರ ತಂದೆ ಮತ್ತು ಸಂಬಂಧಿಕರ ಸಮಾಧಿಗಳು ಸಹ ಇದ್ದು, ಅಲ್ಲಿಗೆ ತೆರಳಲು ಉಚ್ಚ ನ್ಯಾಯಾಲಯ ಆದೇಶದಂತೆ 12 ಅಡಿಗಳ ರಸ್ತೆ ಮೀಸಲಿಡಲಾಗಿದ್ದು, ಈ ರಸ್ತೆ ವಿಚಾರದಲ್ಲಿ ಪಹಣಿ, ಮ್ಯುಟೇಷನ್, ನಕಾಶೆ, ಭೂ-ಪರಿವರ್ತನೆ ಪ್ರತಿಗಳಲ್ಲಿ ದಾಖಲೆಯಾಗಿರುತ್ತದೆ ಎಂದರು.

ಸದರಿ ವಿಚಾರದಲ್ಲಿ ಬೆ.ಪೂರ್ವ ತಾಲ್ಲೂಕು ತಹಶಿಲ್ದಾರ್ ರವರಿಗೆ ಕಳೆದ ತಿಂಗಳಲ್ಲಿ ಮನವಿ ಸಲ್ಲಿಸಿದ್ದು, ತಹಶಿಲ್ದಾರ್ ರವರು ಕೆ.ಕೃಷ್ಣಪ್ಪ ನವರ ದಾಖಲೆಗಳನ್ನು ಪರಿಶೀಲಿಸಿ ವರ್ತೂರು ಪೋಲೀಸರಗೆ ಕಾಂಪೌಂಡ್ ಕೆಲಸ ನಿಲ್ಲಿಸುವಂತೆ ಸೂಚಿಸಿದರು.

ಚಾಂಪಿಯನ್ಸ್ ಗ್ರೂಪ್ ಸಂಸ್ಥೆ ಯೊಂದಿಗೆ ಕೆಲ ಪೋಲಿಸರು ಶಾಮಿಲ್ ಆಗಿದ್ದು, ಕಾಂಪೌಂಡ್ ನಿರ್ಮಾಣ ಕೆಲಸ ಮುಂದುವರಿಸಲು ಸೂಚಿಸಿರುತ್ತಾರೆ ಎಂದು ಆರೋಪಿಸಿದರು.

ನಂತರ ಮಾತನಾಡಿದ ಎಸ್.ಎಸ್.ಡಿ ಹಾಗೂ ಆರ್.ಪಿ.ಐ ರಾಜ್ಯಾಕ್ಷರಾದ ಎಂ.ವೆಂಕಟಸ್ವಾಮಿ, ಮುಳ್ಳೂರು ಗ್ರಾಮದ ವಾಸಿ ಕೆ.ಕೃಷ್ಣಪ್ಪ ನವರಿಗೆ ಚಾಂಪಿಯನ್ಸ್ ಗ್ರೂಪ್ ಸಂಸ್ಥೆಯವರು ಪೋಲಿಸ್ ಮೂಲಕ ಕಿರುಕುಳ ನೀಡುತ್ತಿರುವುದಲ್ಲದೆ ವರ್ತೂರು ಠಾಣೆ ಯಲ್ಲಿ ರೌಡಿ ಶೀಟರ್ ಮಾಡಿಸುತ್ತೆವೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದರು.

ಈ ವಿಚಾರವನ್ನು ತಹಶಿಲ್ದಾರ್ ಅವರ ಗಮನಕ್ಕೆ ತಂದಾಗ ಅವರೆ ಖುದ್ದಾಗಿ ಕೆ.ಕೃಷ್ಣಪ್ಪ ನವರಿಗೆ ಪೋಲಿಸರು ಪ್ರಾಣ ರಕ್ಷಣೆ ನೀಡಲು ಸೂಚಿಸಿದರು ಸಹಾ ಕಿರುಕುಳ ತಪ್ಪಿಲ್ಲಾ ಎಂದು ದೂರಿದರು.

ಇದರ ವಿಚಾರದಲ್ಲಿ ಕೃಷ್ಣಪ್ಪ ನವರ ಮೇಲೆ ದೌರ್ಜನ್ಯ ಎಸಗಿದ ಇನ್ಸ್‌ಪೆಕ್ಟರ್ ಪ್ರವೀಣ್ ಬಾಬು ರವರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ವೈಟ್ ಫೀಲ್ಡ್ ವಿಭಾಗದ ಎಸಿಪಿ ರವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ದಳಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸೋರಹುಣಸೆ ವೆಂಕಟೇಶ್, ಡಿ.ಎಸ್.ಎಸ್ ರಾಜ್ಯಾಧ್ಯಕ್ಷ ಎನ್.ಮೂರ್ತಿ, ಕೆ.ಆರ್.ಎಸ್ ರಾಜ್ಯ ಉಪಾಧ್ಯಕ್ಷ ಮುಳ್ಳೂರು ಶ್ರೀನಿವಾಸ್ ಮಾಜಿ ಭೂ ನ್ಯಾಯ ಮಂಡಳಿ ಸದಸ್ಯ ಮುನಿರಾಜು, ದಳಿತ ಮುಖಂಡರಾದ ಕನ್ನಲ್ಲಿ ಕೃಷ್ಣಪ್ಪ, ಗೋಪಾಲ್, ವೈಟ್ ಫೀಲ್ಡ್ ಮುರಿಗೇಶ್, ಸತ್ಯವತಿ ಸೇರಿದಂತೆ ಹಲವಾರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos