ಬಿಬಿಎಂಪಿ ಕಛೇರಿಯ ಮುಂದೆ ಪ್ರತಿಭಟನೆ

ಬಿಬಿಎಂಪಿ ಕಛೇರಿಯ ಮುಂದೆ ಪ್ರತಿಭಟನೆ

ಮಹದೇವಪುರ, ಅ. 26: ಕ್ಷೇತ್ರದ ಕಾಡುಗುಡಿ ವಾರ್ಡ್ ನಲ್ಲಿ ಮೂಲ ಭೂತ ಸೌಕರ್ಯಗಳಿಗೆ ಆಗ್ರಹಿಸಿ ನೂರಾರು ನಿವಾಸಿಗಳು ಬಿಬಿಎಂಪಿ ಕಛೇರಿಯ ಮುಂದೆ ರಸ್ತೆ ತಡೆದು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿದರು.

ವಾರ್ಡ್ ನಲ್ಲಿ ಕುಡಿಯುವ ನೀರು, ರಸ್ತೆ, ಸುಸಜ್ಜಿತ ಚರಂಡಿ ಸೇರಿದಂತೆ ಹಲವು ಸಮಸ್ಯೆ ಕುರಿತು ಪ್ರತಿಭಟನೆ ಮಾಡಿದರು.

ಪ್ರತಿಭಟನೆಯನ್ನು ಉದ್ದೇಶಿ ಮಾತನಾಡಿದ ಪ್ರತಿಭಟನಾಕಾರ ಪ್ರದೀಪ್, ನಾವು ಬಿಬಿಎಂಪಿಗೆ ಸಮಯಕ್ಕೆ ಕಂದಾಯ ಪಾವತಿಸುತ್ತೆವೆ. ಬಿಬಿಎಂಪಿ ಅದಿಕಾರಿಗಳು ನಮಗೆ ಮೂಲಭೂತ ಸೌಕರ್ಯಗಳು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು. ಸರಿಯಾದ ರಸ್ತೆ ಇಲ್ಲದೆ ಶಾಲಾ ಮಕ್ಕಳಿಗೆ, ವೃದ್ದರಿಗೆ, ಗರ್ಭಿಣಿ ಮಹಿಳೆಯರಿಗೆ ತೀವ್ರ ತೊಂದರೆ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos