ಕಛೇರಿ ಉದ್ಘಾಟನೆಗೆ ಪ್ರತಿಭಟನೆ ಬಿಸಿ

ಕಛೇರಿ ಉದ್ಘಾಟನೆಗೆ ಪ್ರತಿಭಟನೆ ಬಿಸಿ

ಶಿರಾ: ಹಾಲಿ ಶಾಸಕರು ಮರಣ ಹೊಂದಿರುವ ಸಂದರ್ಭದಲ್ಲಿ, ತರಾತುರಿಯಲ್ಲಿ ನೂತನ ತಾಲ್ಲೂಕು ಕಚೇರಿ ಉದ್ಘಾಟಿಸಲಾಗುತ್ತಿದ್ದು, ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಮಾನ ಎಂದು ವಿವಿಧ ಸಂಘಟನೆಗಳು ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಅಮರಾಪುರ ರಸ್ತೆಯ ಮೂಲಕ ಸಾಗಿ ಬಂದ ಮಾನವ ಬಂಧುತ್ವ ವೇದಿಕೆ, ದಲಿತ ಶೋಷಿತ ಸಂಘರ್ಷ ಸಮಿತಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮಿನಿ ವಿಧಾನ ಸೌಧದ ಉದ್ಘಾಟನೆ ಕುರಿತು ಅಸಮಧಾನ ವ್ಯಕ್ತಪಡಿಸಿದ್ದು, ಪೂರ್ಣಗೊಳ್ಳದ ಕಛೇರಿ, ಪೀಠೋಪಕರಣಗಳೇ ಇಲ್ಲದೇ ಇದ್ದು, ಸ್ಥಳೀಯ ಶಾಸಕರ ಗೈರು ಹಾಜರಿಯಲ್ಲಿ ಉದ್ಘಾಟನೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ. ಆದ್ದರಿಂದ ಉದ್ಘಾಟನೆ ಕಾರ್ಯಕ್ರಮ ಹಿಂಪಡೆಯುವಂತೆ ಆಗ್ರಹಿಸಿ, ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರವಾಸಿ ಮಂದಿರ ವೃತ್ತದಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ಪ್ರತಿಭಟನಾಕಾರರನ್ನು ಪೊಲೀಸರು ತಡೆಯುವ ಯತ್ನ ನಡೆಸಿದರು. ಸ್ಥಳದಲ್ಲೇ ಕುಳಿತು ಪ್ರತಿಭಟಿಸಿದ ಪ್ರತಿಭಟನಾಕಾರರು ಇದು ಬಿಜೆಪಿಯ ಬೈ ಎಲೆಕ್ಷನ್ ಗಿಮಿಕ್ ಎಂದು ವ್ಯಂಗ್ಯವಾಡಿದರು. ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಪ್ರತಿಭಟನಾಕಾರರು ಉದ್ಘಾಟನೆ ವಿರುದ್ಧವಾಗಿ ಸಲ್ಲಿಸಿದ ಮನವಿ ಪತ್ರವನ್ನು ಪಡೆದುಕೊಂಡರು.

ಫ್ರೆಶ್ ನ್ಯೂಸ್

Latest Posts

Featured Videos