ಡಿಕೆಶಿ ಬಂಧನಕ್ಕೆ ಪ್ರತಿಭಟನೆ

ಡಿಕೆಶಿ ಬಂಧನಕ್ಕೆ ಪ್ರತಿಭಟನೆ

ದೇವನಹಳ್ಳಿ, ಸೆ. 5: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ನವದೆಹಲಿಯಲ್ಲಿ ಜಾರಿ ನಿರ್ದೇಶನಾಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ನಗರದ ಹಳೇ ಬಸ್ಸ್ ನಿಲ್ದಾಣದ ಹತ್ತಿರ ದೇವನಹಳ್ಳಿ ಮತ್ತು ವಿಜಯಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಟೈರ್ ಗಳಿಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ನಗರದ ಪ್ರವಾಸಿ ಮಂದಿರದಿಂದ  ಹಳೇ ಬಸ್ಸ್ ನಿಲ್ದಾಣದಿಂದ ಹೊಸ ಬಸ್ಸ್ ನಿಲ್ದಾಣದಿಂದ ಮಿನಿ ವಿಧಾನ ಸೌಧ ವರೆಗೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟಿಸಿದರು.

ರಾಜಕೀಯ ದ್ವೇಷಕ್ಕಾಗಿ ಸಂಸ್ಥೆಯನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪ್ರಭಾವಿಗಳನನ್ನೇ ಗುರಿ ಆಗಿಸಿಕೊಂಡು ದಾಳಿ ಮಾಡುತ್ತಿದೆ. ಇಂತಹ ರಾಜಕೀಯ ದುರುದ್ದೇಶಗಳನ್ನು ಮೊದಲು ಬಿಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.

ಮಾಜಿ ಶಾಸಕ ಮುನಿ ನರಸಿಂಹಯ್ಯ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಸ್ವಾಯತ್ತ ಸಂಸ್ಥೆಗಳಾದ ಆದಾಯ ತೆರಿಗೆ ಇಲಾಖೆ ,ಜಾರಿ ನಿರ್ದೇಶನಾಲಯಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಸದೆ ಬಡಿಯುವ ಕಾರ್ಯದಲ್ಲಿ  ಕೇಂದ್ರ  ಬಿಜೆಪಿ ಸರ್ಕಾರ ತೊಡಗಿದೆ.

ವಿರೋಧ ಪಕ್ಷಗಳ ಮೇಲೆ ರಾಜಕೀಯ ಪ್ರೇರಿತವಾಗಿ ದಾಳಿ ಮಾಡಿಸುತ್ತಿದೆ ಇದು ಪ್ರಜಾ ಪ್ರಭುತ್ವದ ಕಗ್ಗೊಲೆ ಆಗಿದ್ದು, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ಗುಜುರಾತ್ ಶಾಸಕರನ್ನು ಕರ್ನಾಟಕಕ್ಕೆ ಕರೆ ತಂದು ರಾಜ್ಯದ ಗುಜುರಾತ್ ಶಾಸಕರನ್ನು ರೆಸಾರ್ಟ್ ಒಂದರಲ್ಲಿ ಅವರನ್ನು ಇರಿಸಿಕೊಂಡಿದ್ದೆ ಅದಕ್ಕೆ ಕಾರಣವಾಗಿದೆ..

ಡಿಕೆಶಿ ಅವರ ಪರವಾಗಿ ನಾವೆಲ್ಲರೂ ಜೊತೆ ಇರುತ್ತೇವೆ  ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಪ್ರಸನ್ನ ಕುಮಾರ್ ಮಾತನಾಡಿ, ಬಿಜೆಪಿ ಕೇಂದ್ರ ಸರ್ಕಾರವು  ರಾಜಕೀಯ ದ್ವೇಷಕ್ಕಾಗಿ ಏನೆಲ್ಲೇ ಮಾಡುತ್ತಿದೆ ಎಂಬುವುದು ಇಡೀ ದೇಶಕ್ಕೆ ತಿಳಿಯುತ್ತಿದೆ. ವಿರೋಧ ಪಕ್ಷದ ನಾಯಕರುಗಳನ್ನು ಹಣಿಯಲು ಐಟಿ ಮತ್ತು ಇಟಿ ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ಬಲ ಕುಗ್ಗಿಸಲು ಈ ರೀತಿಯಾಗಿ ಮಾಡಿತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಲ ಕುಗ್ಗಿಸಲು ಆಗುವುದಿಲ್ಲ. ಮುಂದಿನ 17 ಕ್ಷೇತ್ರಗಳಲ್ಲಿ ಉಪ ಚುನಾವಣೆಗಳಲ್ಲಿ ತಕ್ಕ ಪಾಠವನ್ನು ಜನ ಕಲಿಸುತ್ತಾರೆ ಎಂದರು.

ರಾಧಮ್ಮ, ತಾಪಂ ಅಧ್ಯಕ್ಷೆ ಚೈತ್ರಾ, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮ ಚಂದ್ರಪ್ಪ, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ, ಜಿಲ್ಲಾ  ಕೃಷಿಕ ಸಮಾಜದ ಅಧ್ಯಕ್ಷ ಎಸ್ ಆರ್ ರವಿಕುಮಾರ್, ಕೆಪಿ ಸಿಸಿ ಸದಸ್ಯ ಚೇತನ್ ಗೌಡ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎಸ್ ಜಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಸ್ ಪಿ ಮುನಿರಾಜು, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಂಜುನಾಥ್, ಸದಸ್ಯ ವೆಂಕಟೇಶ್, ಮುನೇಗೌಡ, ಚಿಕ್ಕ ಬಳ್ಳಾಪುರ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮಾರುತಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಆರ್ ಸುಮಂತ್, ಕುಂದಾಣ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಕೋದಂಡರಾಮಯ್ಯ, ಜಿಲ್ಲಾ ಹಿಂದುಳಿದ ವರ್ಗ ಕಾಂಗ್ರೆಸ್ ಅಧ್ಯಕ್ಷ ಅಪ್ಪಣ್ಣ, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಪುರುಷೋತಮ್ ಕುಮಾರ್, ಮುಖಮಡರಾದ ಚಿನ್ನಪ್ಪ, ಮುನಿರಾಜು, ನಂದಕುಮಾರ್, ಸಂದೀಪ್, ಎಮ್ ಎನ್ ರಾಜಣ್ಣ, ಸೋಮಶೇಖರ್, ಪಟಾಲಪ್ಪ, ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos