ನಿವೇಶನ ಹಂಚಿಕೆ ಒತ್ತಾಯಿಸಿ ಪ್ರತಿಭಟನೆ

ನಿವೇಶನ ಹಂಚಿಕೆ ಒತ್ತಾಯಿಸಿ ಪ್ರತಿಭಟನೆ

ಕೆ.ಆರ್‌.ಪುರ. ಜ. 06: ಫಲಾನುಭವಿಗಳಿಗೆ ಕೂಡಲೇ ನಿವೇಶನಗಳನ್ನು ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಿಪಬ್ಲಿಕನ್ ಸೇನೆ ಹಾಗೂ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಪೂರ್ವ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೆ.ಆರ್.ಪುರ ತಾಲೂಕು ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಭಟನೆಯಲ್ಲಿ ಕರ್ನಾಟಕ ರಿಪಬ್ಲಿಕನ್ ಸೇನೆ ರಾಜ್ಯಧ್ಯಕ್ಷ ಜಿಗಣಿ ಶಂಕರ್ ಮಾತನಾಡಿ, ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಚನ್ನಸಂದ್ರ ಗ್ರಾಮದ ಸರ್ವೇ ನಂ.115ರಲ್ಲಿ ದಲಿತ, ಅಲ್ಪ ಸಂಖ್ಯಾತ ಮತ್ತು ಹಿಂದುಳಿದವರ್ಗಗಳಿಗೆ ಮತ್ತು 2006ರಲ್ಲಿ ಪಂಚಾಯಿತಿ ಸಭೆಯಲ್ಲಿ ತೀರ್ಮಾನಿಸಿರುವ ಫಲಾನುಭವಿಗಳಿಗೆ ಇದು ವರೆಗೂ ನಿವೇಶನಗಳನ್ನು ಹಂಚಿಕೆ ಮಾಡಿಲ್ಲ ಎಂದು ದೂರಿದರು.

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಮೀಸಲಿಟ್ಟಿರುವ 2 ಎಕರೆ ಜಮೀನಿನಲ್ಲಿ 100 ಮಂದಿ ಫಲಾನುಭವಿಗಳಿಗೆ ನಿವೇಶನ ನೀಡುವುದಾಗಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಆದೇಶದಂತೆ ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಹೆಸರಿಗೆ 8 ಸಾವಿರ ಡಿ.ಡಿ.ಕಟ್ಟಿಸಿಕೊಂಡಿದ್ದಾರೆ, ಆದರೆ ಇದುವರೆಗೂ ನಿವೇಶನ ನೀಡದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕ ದಲಿತ ರಕ್ಷಣಾ ವೇದಿಕೆ ಸಂಸ್ಥಾಪಕ ಸೊರುಣುಸೆ ವೆಂಕಟೇಶ್ ಮಾತನಾಡಿ, ಗುರುತಿಸಿರುವ 100 ಮಂದಿ ಫಲಾನುಭವಿಗಳಿಗೆ ಈ ಜಾಗದಲ್ಲಿ ನಿವೇಶನ ಹಂಚಿಕೆ ಮಾಡುವಂತೆ ಬಿಬಿಎಂಪಿಗೆ ಪಟ್ಟಿಯನ್ನು ವರ್ಗಾವಣೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಉಪ ತಹಶಿಲ್ದಾರ್ ಶಾರದ ಮನವಿ ಸ್ವೀಕರಿಸಿ ಮಾತನಾಡಿ, ಸಂಭಂದಪಟ್ಟ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವಾಗಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ಈ ಪ್ರತಿಭಟನೆಯಲ್ಲಿ ಕೆ.ಆರ್.ಎಸ್ ಕಾರ್ಮಿಕ ಘಟಕ ರಾಜ್ಯಾಧ್ಯಕ್ಷ ಕನ್ನಲ್ಲಿ ಕೃಷ್ಣಪ್ಪ, ಕ.ದ.ರ.ವೆ.ರಾಜ್ಯ ಕಾರ್ಯದರ್ಶಿ ಕಿರಣ್‌ಕುಮಾರ್, ಯುವ ಘಟಕ ಅಧ್ಯಕ್ಷ ವಿಜಿ ಕುಮಾರ್, ಕೆ.ಆರ್.ಎಸ್ ಬೆಂಗಳೂರು ಪೂರ್ವ ತಾಲೂಕು ಅಧ್ಯಕ್ಷ ಕಾವೇರಪ್ಪ, ದಲಿತ ಮುಖಂಡರಾದ ಚಳುವಳಿ ರಾಜನ್ನ, ಸಮೇತನಹಳ್ಳಿ ಮಲ್ಲೇಶ್, ಪದಾಧಿಕಾರಿಗಳಾದ ನರಸಿಂಹಯ್ಯ, ವೈ.ರಾಜು, ರಾಜ್‌ ಗೋಪಾಲ್ ಮತ್ತಿತರರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos