ಪೌರತ್ವ ವಿರೋಧಿಸಿ ಸಂಘಟನೆಗಳಿಂದ ಪ್ರತಿಭಟನೆ

ಪೌರತ್ವ ವಿರೋಧಿಸಿ ಸಂಘಟನೆಗಳಿಂದ ಪ್ರತಿಭಟನೆ

ಮಧುಗಿರಿ, ಡಿ. 31: ಎನ್‌ಆರ್‌ಸಿ ಮತ್ತು  ಸಿಎಎ ಕಾಯ್ಧೆ ವಿರೋಧಿಸಿ ಮುಸ್ಲಿಂ ಸಮುದಾಯ, ಕಾಂಗ್ರೆಸ್ ಹಾಗೂ ಡಿ.ಎಸ್.ಎಸ್ ಮುಖಂಡರು ಪ್ರತಿಭಟನೆ ನಡೆಸಿದರು.

ಪಟ್ಟಣದ ಅಂಬೇಡ್ಕರ್ ಪ್ರತಿಮೆ ಮುಂಭಾಗ ತಾಲ್ಲೂಕಿನ ಮುಸ್ಲಿಂ ಸಮುದಾಯದ ಮುಖಂಡರು ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪೌರತ್ವ ಕಾಯ್ದೆ ಜಾತ್ಯಾತೀತ ರಾಷ್ಟ್ರವಾದ ಭಾರತದಲ್ಲಿ ಭಾವೈಕ್ಯತೆ ಮತ್ತು ನಾಗರೀಕತೆಗೆ ಧಕ್ಕೆ ಉಂಟಾಗುವಂತಾಗಿದೆ. ಆದ್ದರಿಂದ ಈ ಕೂಡಲೇ ಪೌರತ್ವ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಪುನರ್ ಪರಿಶೀಲಿಸಬೇಕೆಂದು ಆಗ್ರಹಿಸಿದರು.

ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲಾ ಸಮುದಾಯದವರು ಸಹೋದರರಂತೆ ಜೀವನ ನಡೆಸುತ್ತಿದ್ದಾರೆ. ಆದರೆ ಸಿಎಎ, ಎನ್‌ಆರ್‌ಸಿ  ಕಾಯ್ಧೆಯಿಂದ ಜನರಿಗೆ ಸಮಸ್ಯೆಯಾಗಿ, ಶಾಂತಿ ಮತ್ತು ನೆಮ್ಮದಿ ಹಾಳಾಗುತ್ತಿದೆ. ಅನಗತ್ಯವಾಗಿ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಮುಸ್ಲಿಂ ಮುಖಂಡರು ಆರೋಪಿಸಿದರು.

ಜಿ.ಪಂ.ಸದಸ್ಯ ಜಿ.ಜೆ.ರಾಜಣ್ಣ, ಮಾಜಿ ಸದಸ್ಯ ಎಸ್.ಡಿ.ಕೃಷ್ಣಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಅಯೂಬ್, ಸದಸ್ಯರಾದ ಎಂ.ಎಸ್.ಚಂದ್ರಶೇಖರ್, ಅಲೀಂ, ಮಸೀದಿ ಅಧ್ಯಕ್ಷರಾದ ಅಲೀಂ ಸಾಬ್, ಕುದ್ಧೂಸ್ , ಎಂ.ಆರ್.ಕಲೀಲ್, ಸನ್ನಾಉಲ್ಲಾ ಸಾಬ್, ಮುಖಂಡರಾದ ಸಾಧಿಕ್, ಸಯ್ಯದ್ ಕರೀಂ, ಸಯ್ಯದ್ ಬಾಬಾ, ಬಾಬಾ ಪಕೃದ್ದೀನ್, ಶಫಿ ಅಹಮದ್ ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos