ವಕೀಲರಿಂದ ಪ್ರತಿಭಟನೆ

ವಕೀಲರಿಂದ ಪ್ರತಿಭಟನೆ

ದೇವನಹಳ್ಳಿ, ನ. 05: ದೆಹಲಿಯ ತಿಸ್ ಹಜಾರಿ ನ್ಯಾಯಾಲಯದಲ್ಲಿ ಪೋಲೀರು ವಕೀಲರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಗುಂಡು ಹಾರಿಸಿ ಕೊಲ್ಲಲು ಪ್ರಯತ್ನಿಸಿರುವುದನ್ನು ಖಂಡಿಸಿ ನಗರದ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ನ್ಯಾಯಾಲಯ ಕಲಾಪಗಳಿಂದ ಹೊರ ಉಳಿದು ಪ್ರತಿಭಟನೆ ನಡೆಸಿದರು.

ವಕೀಲರ ಮೇಲೆ ಪದೇ ಪದೇ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೂಡಲೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೂಕ್ತ ಕಾನೂನನ್ನು ರೂಪಿಸಿ ವಕೀಲರಿಗೆ ರಕ್ಷಣೆ ಸಿಗಬೇಕು ಎಂದು ಪ್ರತಿಭಟನೆಯಲ್ಲಿ ವಕೀಲರು ಒತ್ತಾಯಿಸಿದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಆರ್ ಮಾರೇ ಗೌಡ ಮಾತನಾಡಿ, ಪೋಲೀಸರು ಪದೇ ಪದೇ ವಕೀಲರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ದೆಹಲಿಯ ತಿಸ್ ಹಜಾರಿ ನ್ಯಾಯಾಲಯದಲ್ಲಿ ಪೋಲೀಸರು ವಕೀಲರ ಮೇಲೆ ಹಲ್ಲೆ ಮಾಡಿದ ಘಟನೆಯಿಂದಾಗಿ ತೀವ್ರ ಸ್ವರೂಪದ ಗಾಯಗಳಾಗಿದೆ. ಪೋಲೀಸರ ಈ ಅಮಾನವೀಯ ಕೃತ್ಯವನ್ನು ಖಂಡಿಸಬೇಕು. ತಪ್ಪಿತಸ್ಥ ಪೋಲೀಸರ ವಿರುದ್ಧ ಕಾನೂನು ಕ್ರಮ ಕೈ ಗೊಳ್ಳಬೇಕು. ಒಂದು ದಿನದ ಮಟ್ಟಿಗೆ ನ್ಯಾಯಾಲಯದ ಕಲಾಪದಿಂದ ಹೊರ ಉಳಿದು ಪ್ರತಿಭಟಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಈ ಹಿಂದೆ ಬ್ರಿಟೀಷರು ನಮ್ಮನ್ನು ಆಳ್ವಿಕೆ ಮಾಡಿ ಹೋಗಿದ್ದಾರೆ. ಅವರು ನೀಡಿರುವ ತರಬೇತಿಯನ್ನು ಪೋಲೀಸರು ಕಲಿತು ವಕೀಲರು ಮತ್ತು ಸಾಮಾನ್ಯ ಜನರ ಮೇಲೆ ತಮ್ಮ ದರ್ಪವನ್ನು ತೋರಿಸುತ್ತಿದ್ದಾರೆ. ವಕೀಲರು ಇಂತಹ ದೌರ್ಜನ್ಯಗಳನ್ನು ತಡೆಗಟ್ಟಲು ಪೋಲೀಸರ ವಿರುದ್ಧ ಕ್ರಾಂತಿ ಆಗಬೇಕು. ಕೇಂದ್ರ ಸರ್ಕಾರ ವಕೀಲರಿಗೆ ರಕ್ಷಣೆ ನೀಡುವಂತ ಕಾಯ್ದೆಯನ್ನು ಜಾರಿಗೆ ತರ ಬೇಕು. ಸಾಮಾನ್ಯ ಜನರಿಗೆ ಎಷ್ಟರ ಮಟ್ಟಿಗೆ ಇವರು ಗೌರವ ನೀಡುತ್ತಾರೆ ಎಂಬುವುದು ಅರ್ಥವಾಗುವುದು. ಒಂದೆಲ್ಲ ಒಂದು ರೀತಿ ವಕೀಲರ ಮೇಲೆ ಪೋಲೀಸರು ಹಲ್ಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿಎಮ್ ಬೈರೇಗೌಡ ಮಾತನಾಡಿ, ವಕೀಲರು ಕಕ್ಷಿದಾರರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಿದ್ದಾರೆ. ದೆಹಲಿಯಲ್ಲಿ ವಕೀಲರ ಮೇಲೆ ನಡೆದಿರುವ ಹಲ್ಲೆ ಆಗಿರುವುದರಿಂದ ವಕೀಲರು ರ್ನಿಭೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಅಹಿತಕರ ಘಟನೆಯಿಂದ ವಕೀಲರು ಭಯ ಪಡುವಂತೆ ಆಗಿದೆ ಎಂದರು.

ಈ ವೇಳೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಜಯ ರಾಮಪ್ಪ, ಕಾರ್ಯದರ್ಶಿ ಎಚ್.ಸಿ ಆನಂದ್, ಖಜಾಂಚಿ ವೆಂಕಟೇಶ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ, ಮಾಜಿ ಕಾರ್ಯದರ್ಶಿ ಪ್ರಭಾಕರ್ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos