ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

ಕೆ.ಆರ್.ಪುರ: ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯಿದೆ ಕೂಡಲೆ ರದ್ದುಪಡಿಸುವಂತೆ ಒತ್ತಾಯಿಸಿ ಕರುನಾಡ ರೈತ ಸಂಘದ ಪದಾಧಿಕಾರಿಗಳು ಬಿಬಿಎಂಪಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತ್ರತ್ವ ವಹಿಸಿ ಮಾತನಾಡಿದ ಕರುನಾಡ ರೈತ ಸಂಘದ ರಾಜ್ಯಾದ್ಯಕ್ಷ ಡಾ.ಮಹಬೂಬ್ ಪಾಷಾ, ಸರ್ಕಾರ ತಂದಿರುವ ಭೂಸುಧಾರಣಾ ಕಾಯ್ದೆ ರೈತರಿಗೆ ಅನ್ಯಾಯ ಮಾಡಿದಂತ್ತಾಗಿದೆ ಎಂದರು.
ಭೂಮಿ ಖರೀದಿ ಮಾಡುವ ಅವಕಾಶ ನೀಡಿದರೆ ಶ್ರೀಮಂತರು, ಕಾರ್ಪೊರೇಟ್ ಸಂಸ್ಥೆಗಳು ರೈತರಿಗೆ ಹೆಚ್ಚಿನ ಆಮಿಷವೊಡ್ಡಿ ಕೃಷಿ ಭೂಮಿ ಕೊಂಡು ವ್ಯವಸಾಯ ಮಾಡುವುವರ ಸಂಖ್ಯೆ ಹಾಗು ವ್ಯವಸಾಯ ಭೂಮಿ ಕಡಿಮೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರು ತಾವು ಬೆಳೆದ ಬೆಳೆಗಳನ್ನು ನೇರವಾಗಿ ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದರು, ಇದರಿಂದ ಜನರಿಗೆ ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲವಾಗುತಿತ್ತು, ಕಾಯ್ದೆಯಿಂದ ಭವಿಷ್ಯದಲ್ಲಿ ಕಾರ್ಪೊರೇಟ್ ಸಂಸ್ಥೆಗಳನ್ನು ಅವಲಂಭಿಸಬೇಕಾಗುತ್ತದೆ ಎಂದು ಹೇಳಿದರು.
ರೈತರಿಂದ ಜಮೀನು ಖರೀದಿ ಮಾಡಿ ರೆಸಾರ್ಟ್ಗಳನ್ನು ನಿರ್ಮಾಣ ಮಾಡಿಕೊಂಡು ವ್ಯವಸಾಯದ ಜಮೀನುಗಳನ್ನು ಲಪಟಾಯಿಸಲು ಸಂಚು ರೂಪಿಸಿದ್ದಾರೆ. ವಿದೇಶಿ ಕಂಪನಿಗಳಿಂದ ರೈತರು ಬಿಕ್ಷೆ ಬೆಡುವ ಪರಿಸ್ಥಿತಿ ನಿರ್ಮಾಣವಾಗುವುದು ಖಚಿತ ಎಂದು ತಿಳಿಸಿದರು.
ಈ ಕೂಡಲೇ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಯುವ ಘಟಕ ರಾಜ್ಯಾಧ್ಯಕ್ಷ ಹೆಚ್.ಎನ್. ವೇಣು, ಗೌರವಾಧ್ಯಕ್ಷ ಮಂಜುನಾಥ್, ಪ್ರ.ಕಾರ್ಯದರ್ಶಿ ರವಿಕುಮಾರ್, ಬೆ.ಗ್ರಾ.ಅಧ್ಯಕ್ಷ ಇಬ್ರಾಹಿಂ ಪಾಷಾ, ಕಾರ್ಯದರ್ಶಿ ಉಪೇಂದ್ರಕುಮಾರ್, ಬೆ.ಗ್ರಾಮಾಂತರ ಕಾರ್ಯದರ್ಶಿ ಲಕ್ಷ್ಮಣ್, ಸಹ ಕಾರ್ಯದರ್ಶಿ ಖಲೀಲ್ ಮತ್ತಿತರರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos