ಮೋಲೆಕ್ಸ್ ಕಂಪನಿ ವಿರುದ್ಧ ಪ್ರತಿಭಟನೆ

ಮೋಲೆಕ್ಸ್ ಕಂಪನಿ ವಿರುದ್ಧ ಪ್ರತಿಭಟನೆ

ಮಹದೇವಪುರ: ಎಸ್.ಎಲ್.ವಿ ಟ್ರಾವೆಲ್ಸ್ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ದಲಿತನೆಂಬ ಕಾರಣಕ್ಕೆ ಯಾವುದೆ ಸೂಚನೆಯಿಲ್ಲದೆ ರದ್ದು ಮಾಡಲಾಗಿದ್ದು ದಲಿತರಿಗೆ ಮಾಡಿರುವ ಅನ್ಯಾಯ ಎಂದು ಆರ್.ಪಿ.ಐ. ಪಾರ್ಟಿ ನಗರ ಉಪಾಧ್ಯಕ್ಷ ಸಮತಾವಾದಿ ಅರುಣ್ ತಿಳಿದಿದ್ದಾರೆ.
ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ ಬೆಂಗಳೂರು ಘಟಕದ ವತಿಯಿಂದ ಮೋಲೆಕ್ಸ್ ಪ್ರೈವೆಟ್ ಇಂಡಿಯಾ ಲಿಮಿಟೆಡ್ ಕಂಪನಿಯ ವಿರುದ್ದ ವೈಟ್ ಫೀಲ್ಡ್ ವಿಭಾಗ ಮಹದೇವಪುರ ವಲಯದ ಸಹಾಯಕ ಪೋಲಿಸ್ ಆಯುಕ್ತರಿಗೆ ದೂರು ಸಲ್ಲಿಸಿ ಅವರು ಮಾತನಾಡಿದರು.
ವೈಟ್ ಫೀಲ್ಡ್ನ ಎಸ್.ಎಲ್.ವಿ ಟ್ರಾವೆಲ್‌ನವರಿಂದ ಸದರಿ ಕಂಪನಿಯವರು ಕಾರುಗಳನ್ನು ಗುತ್ತಿಗೆ ಪಡೆದಿದ್ದು ಆ ಕಾರುಗಳ ಮೇಲೆ ಡಾ.ಅಂಬೇಡ್ಕರ್ ಭಾವಚಿತ್ರ ಹಾಕಲಾಗಿದೆ ಎಂದು ಏಕಾಏಕಿ ಕಾರುಗಳ ಗುತ್ತಿಗೆ ರದ್ದು ಪಡಿಸಿದ್ದಾರೆ ಎಂದು ದೂರಿದರು. ದಲಿತರೆಂಬ ಕಾರಣದಿಂದ ಅವರ ಕಾರುಗಳ ಗುತ್ತಿಗೆಯನ್ನು ರದ್ದು ಪಡಿಸಿ ಆ ಕಾರುಗಳ ಚಾಲಕರು ಸಂಕಷ್ಟ ಕ್ಕೆ ಸಿಗುವ ಹಾಗೆ ಮಾಡಿದ್ದಾರೆ ಎಂದರು.
ಕಂಪನಿಯ ಆಡಳಿತ ಸಿಬ್ಬಂದಿಗಳಾದ ದೃವ, ಮಧುಕರ್ ರೈ ಹಾಗು ರಾಜೇಶ್ ರೆಡ್ಡಿ ಇವರುಗಳು ಮೇಲು ಜಾತಿಯವರಾಗಿದ್ದು ಕಾರುಗಳ ಮೇಲೆ ಡಾ.ಅಂಬೇಡ್ಕರ್ ಭಾವಚಿತ್ರ ಸಹಿಸದೆ ವಾಹನದ ಟೆಂಡರ್ ರದ್ದು ಪಡಿಸಿರುವ ಕಾರಣಕ್ಕೆ ಅವರುಗಳ ವಿರುದ್ದ ಎಸ್‌ಸಿ, ಎಸ್‌ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಮಹದೇವಪುರ ವಲಯ ಸಹಾಯಕ ಪೋಲಿಸ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಯುವ ಪ್ರಧಾನ ಕಾರ್ಯದರ್ಶಿ ಎಂ.ನಾಗೇಶ್, ಉಪಾಧ್ಯಕ್ಷ ರವಿಯಾದವ್, ಕಾರ್ಯದರ್ಶಿ ಶಿವಕುಮಾರ್, ಹೂಡಿ ವೆಂಕಟೇಶ್, ನಾರಯಣಸ್ವಾಮಿ ಹಾಗು ಡಾ.ನಾರಾಯಣ ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos