ಗರಗದ ಶ್ರೀಗುರು ಮಡಿವಾಳೇಶ್ವರ ಜಾತ್ರೆಯಲ್ಲಿ ಹೈನುಗಾರಿಕೆಗೆ ಉತ್ತೇಜನ

ಗರಗದ ಶ್ರೀಗುರು ಮಡಿವಾಳೇಶ್ವರ ಜಾತ್ರೆಯಲ್ಲಿ ಹೈನುಗಾರಿಕೆಗೆ ಉತ್ತೇಜನ

ಧಾರವಾಡ ಫೆ. 12: ಇಂದು ತಾಲೂಕಿನ ಗರಗದ ಶ್ರೀ ಗುರು ಮಡಿವಾಳೇಶ್ವರ ಜಾತ್ರೆ ಹೈನುಗಾರಿಕೆಗೆ ಉತ್ತೇಜಿಸುವ ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಏರ್ಪಡಿಸಲಾಗಿದ್ದ ಆಕಳು ಮತ್ತು ಎಮ್ಮೆಗಳ ಹಾಲು ಹಿಂಡುವ ( ಕರೆಯುವ) ಸ್ಪರ್ಧೆಗೆ ಗರಗ,ಹಂಗರಕಿ ,ತಡಕೋಡ ,ಕಬ್ಬೇನೂರ ಮತ್ತಿತರ ಗ್ರಾಮಗಳ ರೈತರು,ಹೈನುಗಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಶ್ರೀ ಜಗದ್ಗುರು ಮಡಿವಾಳೇಶ್ವರ ಕಲ್ಮಠ ಟ್ರಸ್ಟ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಎಪಿಎಂಸಿ ಸಹಯೋಗದಲ್ಲಿ ಹಾಲು ಹಿಂಡುವ ( ಕರೆಯುವ) ಸ್ಪರ್ಧೆ ಏರ್ಪಡಿಸಲಾಗಿತ್ತು.

ಹೆಚ್.ಎಫ್.ಮತ್ತು ಜರ್ಸಿ ಆಕಳುಗಳು ಹಾಗೂ ಮುರ್ರಾ ಮತ್ತು ಸುರ್ತಿ ತಳಿಗಳ ಎಮ್ಮೆಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳು ಜರುಗಿದವು.ಹಾಲು ಹಿಂಡಲು ಅವುಗಳ ಮಾಲೀಕರಿಗೆ 20 ನಿಮಿಷಗಳ ಕಾಲಾವಕಾಶ ನೀಡಲಾಯಿತು. ಪ್ರತಿ ಜಾನುವಾರುಗಳ ಹಾಲು ಹಿಂಡುವ ಸ್ಪರ್ಧೆ ಮೇಲ್ವಿಚಾರಣೆಗೆ ಓರ್ವ ಪಶುವೈದ್ಯಾಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜಂಬುನಾಥ ಗದ್ದಿ ಮಾತನಾಡಿ, ಹೈನುಗಾರಿಕೆಯನ್ನು ಪ್ರೋತ್ಸಾಹಿಸುವುದು, ಕೃಷಿಯ ಜೊತೆಗೆ ಉಪಕಸುಬುಗಳ ಮಹತ್ವ ತಿಳಿಸುವುದು ಮತ್ತು ನಿರುದ್ಯೋಗ ನಿವಾರಣೆಯ ಆಶಯದೊಂದಿಗೆ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಹಾಲು ಹಿಂಡುವ ಸ್ಪರ್ಧೆ ಏರ್ಪಡಿಸಲಾಗಿದೆ.ಜೊತೆಗೆ ಹೈನುಗಾರರಿಗೆ ಜಾನುವಾರುಗಳ ವೈಜ್ಞಾನಿಕ ಪೋಷಣೆಯ ವಿಧಾನಗಳು, ಸ್ವಚ್ಚತೆ, ಖನಿಜಾಂಶಯುಕ್ತ ಆಹಾರ ನೀಡಿಕೆ ಕುರಿತು ತಿಳುವಳಿಕೆ ನೀಡಲಾಗುತ್ತಿದೆ ಎಂದರು.

ಪಶುವೈದ್ಯ ಸೇವಾ ಇಲಾಖೆಯ ಡಾ.ಸಾಯಿಕುಮಾರ್ ಹಿಳ್ಳಿ, ಡಾ.ರಮೇಶ ಹೆಬ್ಬಳ್ಳಿ, ಡಾ.ಬಾಲನಗೌಡ್ರ, ಡಾ.ಮುತ್ತನಗೌಡ, ಡಾ.ಆನಂದ ತಡೆಪ್ಪನವರ,  ಡಾ.ಪ್ರಕಾಶ ಬೆನ್ನೂರ, ಡಾ. ಅಪ್ತಾಭ ಯಲ್ಲಾಪೂರ, ಡಾ.ತಿಪ್ಪಣ್ಣ, ಡಾ.ಶರಣಬಸವ ಸಜ್ಜನ, ಡಾ.ಸುರೇಶ ಅರಕೇರಿ, ಕುಂತಿನಾಥ ಇಜಾರಿ, ಶಿವಲಿಂಗ ಕಾಶಿದಾರ್, ಪ್ರಕಾಶ ಸಂಗೊಳ್ಳಿ, ಮಾರ್ತಾಂಡಪ್ಪ ಕತ್ತಿ ಮೊದಲಾದವರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos