ತೆರಿಗೆ ಸಂಗ್ರಹ ಕುರಿತು ಪ್ರಗತಿ ಪರಿಶೀಲನಾ ಸಭೆ

ತೆರಿಗೆ ಸಂಗ್ರಹ ಕುರಿತು ಪ್ರಗತಿ ಪರಿಶೀಲನಾ ಸಭೆ

ಮಹದೇವಪುರ, ಡಿ. 12:  ಮಹದೇವಪುರ ಬಿಬಿಎಂಪಿ ವಲಯದ ವ್ಯಾಪ್ತಿಯಲ್ಲಿ ಈಗಾಗಲೇ ಶೇ.70 ರಷ್ಟು ತೆರಿಗೆಯನ್ನು ಸಂಗ್ರಹ ಮಾಡಿದ್ದು, ಬಾಕಿ ಉಳಿದಿರುವ ಕಂಪನಿಗಳ ತೆರಿಗೆಯನ್ನು ಪಟ್ಟಿ ಮಾಡಿ ಆದಷ್ಟು ಬೇಗ ಸಂಗ್ರಹ ಮಾಡಿ ಎಂದು ಬೆಂಗಳೂರು ನಗರ ಮಹಾ ಪೌರರಾದ ಎಂ.ಗೌತಮ್ ಕುಮಾರ್ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು.

ಮಹದೇವಪುರ ಬಿಬಿಎಂಪಿ ವಲಯ ಕಚೇರಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಕುರಿತಂತೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಗರದಲ್ಲಿ ಬಾಕಿ ಇರುವ ತೆರಿಗೆ ಸಂಗ್ರಹದ ಮಾಡಲು ಹಿರಿಯ ಕಂದಾಯ ಅಧಿಕಾರಿಗಳು ಕಂದಾಯ ನಿರೀಕ್ಷಕರ ಸಭೆ ಕರೆದು ಬಾಕಿ ವಸೂಲಾತಿ ಹೆಚ್ಚಿಸುವ ಕಾರ್ಯವನ್ನು ಮಹದೇವ ಪುರ ಉಪ ವಲಯ ದಿಂದ ಆರಂಭಿಸಿ ನಗರದ ಎಲ್ಲಾ ಉಪ ವಿಭಾಗಗಳಲ್ಲಿ ಆರಂಭಿಸಲಾಗುವುದು ಎಂದರು.

ತೆರಿಗೆ ಸಂಗ್ರಹ ಹೆಚ್ಚಿಸಲು ಕಂದಾಯ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ಆಗದಂತೆ ವಾರಕ್ಕೆ 3 ಬಾರಿ ಬೆಳಗ್ಗೆ 8 ರಿಂದ 9 ಗಂಟೆ ವರೆಗೆ ಕಂದಾಯ ನಿರೀಕ್ಷಕರ ಸಭೆ ನಡೆಸಿ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆಗೆ ಆಧಾಯ ಹೆಚ್ಚಿಸುವ ಚಿಂತನೆಯಿಂದ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು. ಅಧಿಕಾರಿಗಳು ಸಹ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದು, ಸಮಯ ನೀಡಿದರೆ ಆಸ್ತಿ ತೆರಿಗೆ ಹೆಚ್ಚಾಗಿ ಸಂಗ್ರಹ ಮಾಡುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಸಂಬಂದ ಪಟ್ಟ ಯಾವುದೇ ಲೋಪ ದೋಷಗಳಿದ್ದರೂ ಜಂಟಿ ಆಯುಕ್ತರು ಹಾಗೂ ವಿಶೇಷ ಆಯುಕ್ತರು ಸರಿಪಡಿಸುತ್ತಾರೆ ಎಂದರು. ತೆರಿಗೆ ಸಂಗ್ರಹ ಕುರಿತು ಸಂಪೂರ್ಣ ವರದಿ ನೀಡುವಂತೆ ಜಂಟಿ ಆಯುಕ್ತ ವೆಂಕಟಾಛಲಪತಿ ಅಮಹೂ ಚಿಸಿದ್ದೇನೆ ಎಂದು ಹೇಳಿದರು.

ಆಸ್ತಿ ತೆರಿಗೆ ಸಂಗ್ರಹ ಮಾಡುವಲ್ಲಿ ವಿಳಂಬ ಮಾಡಬೇಡಿ. ಜವಾಬ್ದಾರಿಯಿಂದ ನಿಮ್ಮ ಕಾರ್ಯ ನಿರ್ವಹಿಸಿ ತೆರಿಗೆ ಬಾಕಿ ಉಳಿಸಿಕೊಂಡಿರುವರಿಗೆ ನೋಟೀಸ್ ಜಾರಿಮಾಡಿ. ಟೋಟಲ್ ಸ್ಟೇಷನ್ ಸರ್ವೇ ಮಾಡುವ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದು ತಿಳಿಸಿದರು.

ವಲಯದಲ್ಲಿ ಯಾರ್ ಯಾರು ಸುಧಾರಣಾ ಶುಲ್ಕ ಪಾವತಿಸಿಲ್ಲ ಎಂಬ ಸಮರ್ಪಕ ಮಾಹಿತಿ ಸಂಗ್ರಹಿಸಬೇಕು. ನೋಟೀಸ್ ನೀಡಿಯೂ ಹಲವಾರು ವರ್ಷಗಳಿಂದ ಸುಧಾರಣಾ ಶುಲ್ಕ ಪಾವತಿಸದ ಮಾಲೀಕರ ಮೇಲೆ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲು ಕ್ರಮವಹಿಸಲಾಗುವುದು.‌ ಈ ಬಗ್ಗೆ ನಗರ ಪೊಲೀಸ್ ಆಯುಕ್ತರ ಜೊತೆ ಚರ್ಚಿಸಲಾಗುವುದು ಎಂದು ಮಹಾಪೌರರ ತಿಳಿಸಿದರು. 3 ವರ್ಷ ಒಂದೇ ಕಡೆ ಕಾರ್ಯನಿರ್ವಹಿಸುತ್ತಿರುವ ಕಂದಾಯ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳುವಂತೆ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಯಿತು. ಎಲ್ಲಾ ಅಧಿಕಾರಿಗಳು ಸಾರ್ವಜನಿಕರನ್ನು ಗೌರವದಿಂದ ಕಾಣಬೇಕು ಹಾಗೂ ಪಾಲಿಕೆ ಅಧಿಕಾರಿಗಳ ಮೇಲೆ ನಾಗರೀಕರಲ್ಲಿ ಗೌರವ ಬರಲು ಸಾಧ್ಯ ಎಂದರು.

ಈ ವೇಳೆ ಆಡಳಿತ ಪಕ್ಷದ ನಾಯಕರಾದ ಶ್ರೀ ಮುನೀಂದ್ರ ಕುಮಾರ್, ವಿಶೇಷ ಆಯುಕ್ತರು(ಕಂದಾಯ) ಶ್ರೀ ಬಸವರಾಜು, ಮಹದೇವಪುರ ವಲಯ ಜಂಟಿ ಆಯುಕ್ತರಾದ ಶ್ರೀ ವೆಂಕಟಾಚಲಪತಿ ಹಾಗೂ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos