ಇಂದು, ನಾಳೆ ಪ್ರೊ ಕಬಡ್ಡಿ ಹರಾಜು!

ಇಂದು, ನಾಳೆ ಪ್ರೊ ಕಬಡ್ಡಿ ಹರಾಜು!

ಮುಂಬೈ: ಇತ್ತೀಚಿನ ದಿನಗಳಲ್ಲಿ ಕಬಡ್ಡಿ ಎನ್ನುವುದು ಬರೀ ಸ್ಥಳೀಯ ಆಟಯಾಗಿ ಉಳಿದಿಲ್ಲಾ. ಈಗ ಇದು ಅಂತರಾಷ್ಟ್ರೀಯ ಅಟವಾಗಿ ಬೆಳೆದಿದ್ದೆ. 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆ ಇಂದು, ನಾಳೆ ಮುಂಬೈನಲ್ಲಿ ನಡೆಯಲಿದೆ. 500ಕ್ಕೂ ಹೆಚ್ಚು ಆಟಗಾರರು ಹರಾಜಿಗೆ ನೋಂದಣಿ ಮಾಡಿಕೊಂಡಿದ್ದು, ವಿವಿಧ ತಂಡಗಳಿಗೆ ಬಿಕರಿಯಾಗುವ ನಿರೀಕ್ಷೆಯಲ್ಲಿದ್ದಾರೆ.
ಈ ಬಾರಿ ಎಲ್ಲಾ 12 ತಂಡಗಳಿಗೂ ಆಟಗಾರರ ಖರೀದಿಗೆ 4.5 ಕೋಟಿ ರೂಪಾಯಿ ಬದಲು 5 ಕೋಟಿ ರೂಪಾಯಿ ಬಳಸಲು ಅವಕಾಶ ನೀಡಲಾಗಿದೆ. ಆದರೆ ಸದ್ಯ ಎಲ್ಲಾ ತಂಡಗಳು ಕೆಲ ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಇನ್ನುಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲಿವೆ. ಪ್ರತಿ ತಂಡ ಕನಿಷ್ಠ 18 ಹಾಗೂ ಗರಿಷ್ಠ 25 ಆಟಗಾರರನ್ನು ಖರೀದಿಸಬಹುದಾಗಿದೆ. ಸದ್ಯ ಬೆಂಗಳೂರು ಬುಲ್ಸ್‌ನಲ್ಲಿ 9 ಆಟಗಾರರಿದ್ದು, ಇತರರನ್ನು ಹರಾಜಿನಲ್ಲಿ ಖರೀದಿಸಬಹುದಾಗಿದೆ. ತಂಡಕ್ಕೆ ಹರಾಜಿನಲ್ಲಿ ಬಳಸಲು 2.99 ಕೋಟಿ ರುಪಾಯಿ ಬಾಕಿ ಇದೆ.
ಈ ಬಾರಿ ಹರಾಜಿನಲ್ಲಿ ತಾರಾ ಆಟಗಾರರಾದ ಪವನ್ ಶೆರಾವತ್, ವಿಕಾಸ್ ಖಂಡೋಲಾ, ಫಜಲ್ ಅಟ್ರಾಚಲಿ, ಮಣೀಂದರ್ ಸಿಂಗ್, ಫಜಲ್‌ ಟಾಪ್-3 ದುಬಾರಿ ಆಟಗಾರರು ಎನಿಸಿಕೊಂಡಿದ್ದರು. ಈ ಬಾರಿ ಅವರನ್ನು ತಂಡಗಳು ರೀಟೈನ್ ಮಾಡಿಕೊಂಡಿಲ್ಲ.
ಪವನ್ ಶೆರಾವತ್ ಕಳೆದ ಬಾರಿ 2.26 ಕೋಟಿ ರುಪಾಯಿಗೆ ತಮಿಳ್ ತಲೈವಾಸ್ ತಂಡಕ್ಕೆ ಬಿಕರಿಯಾಗಿದ್ದರು. ಆದರೆ ಮೊದಲ ಪಂದ್ಯದಲ್ಲೇ ಗಾಯಗೊಂಡು ಲೀಗ್‌ನಿಂದ ಹೊರಬಿದ್ದಿದ್ದರು. ಮೊನ್ನೆಯಷ್ಟೇ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲಿಸಿಕೊಟ್ಟಿರುವ ಪವನ್ ತಮ್ಮ ಫಿಟ್ನೆಸ್ ಸಾಬೀತುಪಡಿಸಿದ್ದು, ಈ ಬಾರಿಯೂ ಹರಾಜಿನಲ್ಲಿ ಅವರೇ ಅತಿಹೆಚ್ಚು ಮೊತ್ತಕ್ಕೆ ಬಿಕರಿಯಾದರೆ ಅಚ್ಚರಿಯಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos