ಪ್ರಿಯಾಂಕಾಗೆ ಸಿಎಂ ಯೋಗಿ ಎಚ್ಚರಿಕೆ

ಪ್ರಿಯಾಂಕಾಗೆ ಸಿಎಂ ಯೋಗಿ ಎಚ್ಚರಿಕೆ

ಲಕ್ನೋ,ಡಿ. 31 : ಕೇಸರಿ ಬಟ್ಟೆ ಯೋಗಿ ಆದಿತ್ಯನಾಥ್ ಅವರ ಸ್ವತ್ತಲ್ಲ ಎಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ತಿರುಗೇಟು ನೀಡಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ‘ನಾನು ಎಲ್ಲವನ್ನೂ ತ್ಯಾಗ ಮಾಡಿಯೇ ಸಾರ್ವಜನಿಕ ಸೇವೆಗೆ ಬಂದವನು’ ಎಂದು ಹೇಳಿದ್ದಾರೆ.

ಸಿಎಎ ವಿರುದ್ಧದ ಹೋರಾಟವನ್ನು ಬೆಂಬಲಿಸಿ ಲಕ್ನೋ ಪ್ರವಾಸದಲ್ಲಿರುವ ಪ್ರಿಯಾಂಕಾ ಗಾಂಧಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡುವಾಗ ಯೋಗಿ ಆದಿತ್ಯನಾಥ್ ವಿರುದ್ಧ ಹರಿಹಾಯ್ದಿದ್ದರು. ಸಿಎಂ ಯೋಗಿ ಆದಿತ್ಯನಾಥ್ ಕೇಸರಿ ಉಡುಪನ್ನು ಧರಿಸುತ್ತಾರೆ. ಈ ಕೇಸರಿ ಬಣ್ಣ ಅವರ ಸ್ವತ್ತಲ್ಲ, ದೇಶದ ಸ್ವತ್ತು. ಕೇಸರಿ ಹಿಂದೂ ಧರ್ಮದ ಸಂಕೇತ ಎಂದಿದ್ಧಾರೆ. ಹಿಂದೂ ಧರ್ಮದಲ್ಲಿ ದ್ವೇಷ ಸಾಧನೆ ಹಾಗೂ ಹಿಂಸೆಗೆ ಅವಕಾಶವಿಲ್ಲ. ಕೇಸರಿ ಬಟ್ಟೆ ಧರಿಸಿರುವ ಯೋಗಿ ಆದಿತ್ಯನಾಥ್ ಧರ್ಮವನ್ನು ಪಾಲಿಸಬೇಕು ಎಂದಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos