ಪ್ರಿಯಾಂಕಾಗೆ ಸಮುದ್ರಕ್ಕೆ ತಳ್ಳಿದ ಪತಿ

ಪ್ರಿಯಾಂಕಾಗೆ ಸಮುದ್ರಕ್ಕೆ ತಳ್ಳಿದ ಪತಿ

ವಾಷಿಂಗ್ಟನ್. ಜು. 24 : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಜುಲೈ 18 ರಂದು ತಮ್ಮ 37ನೇ ಹುಟ್ಟಹಬ್ಬವನ್ನು ಫ್ಲೋರಿಡಾದ ಮಿಯಾಮಿಯಲ್ಲಿ ಆಚರಿಸಿದ್ದರು. ಪತಿ, ಗಾಯಕ ನಿಕ್ ಜೋನಸ್ ಅವರನ್ನು ಸಮುದ್ರಕ್ಕೆ ತಳ್ಳಿದ ಫೋಟೋ ವೈರಲ್ ಆಗುತ್ತಿದೆ.
ಪ್ರಿಯಾಂಕಾ ತಮ್ಮ ಹುಟ್ಟುಹಬ್ಬವನ್ನು ಪತಿ, ತಾಯಿ, ಸಹೋದರಿ ಪರಿಣಿತಿ ಚೋಪ್ರಾ ಸೇರಿದಂತೆ ಹಲವು ಸ್ನೇಹಿತರ ಜೊತೆ ಆಚರಿಸಿಕೊಂಡಿದ್ದರು. ಪ್ರಿಯಾಂಕಾ ಹುಟ್ಟುಹಬ್ಬದ ಫೋಟೋಗಳು ಒಂದೊಂದಾಗಿ ವೈರಲ್ ಆಗುತ್ತಿದ್ದು, ಈಗ ನಿಕ್ ತಮ್ಮ ಪತ್ನಿಯನ್ನು ಸಮುದ್ರಕ್ಕೆ ತಳ್ಳಿದ ಫೋಟೋ ಕೂಡ ವೈರಲ್ ಆಗುತ್ತಿದೆ.
ನಿಕ್ ಜೋನಸ್ ತಮಾಷೆಗೆ ಎಂದು ತಮ್ಮ ಪತ್ನಿ ಪ್ರಿಯಾಂಕಾರನ್ನು ಸಮುದ್ರಕ್ಕೆ ತಳ್ಳಿದ್ದಾರೆ. ಜುಲೈ 18ರಂದು ಪ್ರಿಯಾಂಕಾ ಅವರ ಹುಟ್ಟುಹಬ್ಬವಿತ್ತು. ಹುಟ್ಟುಹಬ್ಬ ಮುಗಿದರೂ ಸಹ ಪ್ರಿಯಾಂಕ ತಮ್ಮ ಪತಿ, ಹಾಗೂ ಸ್ನೇಹಿತರ ಜೊತೆ ಮಿಯಾಮಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಈ ಹಿಂದೆ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್, ತಾಯಿ ಮಧು ಚೋಪ್ರಾ ಹಾಗೂ ಆತ್ಮೀಯ ಸ್ನೇಹಿತರ ಜೊತೆಗೆ ಕುಳಿತು ಸಿಗರೇಟ್ ಸೇದುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ಫೋಟೋವನ್ನು ಶೇರ್ ಮಾಡುತ್ತಿರುವ ಟ್ವಿಟ್ಟರಿಗರು ಪ್ರಿಯಾಂಕಾ ಅವರ ಕಾಲೆಳೆದಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos