ಖಾಸಗಿ ಬಸ್ ಗಳ ದರ್ಬಾರ್ ಕೆಎಸ್ ಆರ್ ಟಿ ಸಿ ಅಂದರ್ ಬಾಹರ್

ಖಾಸಗಿ ಬಸ್ ಗಳ ದರ್ಬಾರ್ ಕೆಎಸ್ ಆರ್ ಟಿ ಸಿ ಅಂದರ್ ಬಾಹರ್

ತುಮಕೂರು, ನ. 14: ಖಾಸಗಿ ಬಸ್ ಗಳ ದರ್ಬಾರ್ ಕೆಎಸ್ ಆರ್ ಟಿ ಸಿ ಅಂದರ್ ಬಾಹರ್ ನಲ್ಕಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಗೋಳು ಕೇಳೋರಿಲ್ಲ ಇಲ್ಲಿ.

ಪ್ರತಿನಿತ್ಯ ಸರ್ಕಾರಿ ಸಾರಿಗೆ ಬಸ್ಸುಗಳಿಗಾಗಿ ಕಾಯಬೇಕಾದ ಅನಿರ್ಯತೆ ಕೊರಟಗೆರೆ ತಾಲ್ಲೂಕಿನ ಜನತೆಯದು. ಇಲ್ಲಿನ ಶಾಸಕರು ಕೊರಟಗೆರೆ ತಾಲ್ಲೂಕಿನ ಜನತೆಯನ್ನ ಮರೆತ ಹಾಗಿದೆ.

ಅವರಿಗೇನಿದ್ದರೂ ಜೀರೋ ಟ್ರಾಫಿಕ್ ಮತ್ತು ಅಧಿಕಾರ ಅಷ್ಟೇ ಮುಖ್ಯ. ಮತ ಹಾಕಿದ ಜನರ  ಸಮಸ್ಯೆಗಳಿಗೆ ಸ್ಪಂದಿಸುವ ಕನಿಷ್ಟ ಜವಾಬ್ದಾರಿ ಕೂಡಾ ಮರೆತಂತೆ ಕಾಣುತ್ತಿದೆ.

ಮಾನ್ಯ ಕರ್ನಾಟಕ ರಾಜ್ಯದ ಸಾರಿಗೆ ಸಚಿವರೇ ತುಮಕೂರಿನ ಗೌರವಾನ್ವಿತ ಜಿಲ್ಲಾಧಿಕಾರಿಗಳೇ ತಾಲ್ಲೂಕಿನ ಶಾಸಕರೆ ಮಾಜಿ ಉಪ ಮುಖ್ಯ ಮಂತ್ರಿಗಳೇ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳೇ ದಯವಿಟ್ಟು ವಿದ್ಯಾರ್ಥಿಗಳ ಗೋಳು ಕೇಳಿ..

ಕೊರಟಗೆರೆ ತಾಲೂಕಿನಿಂದ 2 ಸಾವಿರ ವಿದ್ಯಾರ್ಥಿಗಳು ಸರಕಾರಿ ಬಸ್ ಪಾಸ್ ಪಡೆದು 10ಲಕ್ಷ ಹಣ ಪಾವತಿಸಿದ್ದಾರೆ.  ಮಧುಗಿರಿ ಮತ್ತು ಪಾವಗಡ ಡಿಪೋದಿಂದ ಬರುವಂತಹ ಸರಕಾರಿ ಬಸ್ಸಿನ ಸೌಲಭ್ಯ ವಿದ್ಯಾರ್ಥಿಗಳಿಗೆ ಸೀಗುತ್ತೀಲ್ಲ.

ಪ್ರತಿದಿನ ಮುಂಜಾನೆ 7 ಗಂಟೆಯಿಂದ 9 ಗಂಟೆವರೇಗೆ ಎರಡು ಗಂಟೆಯ ಅವಧಿಯಲ್ಲಿ ಕೊರಟಗೆರೆ ಪಟ್ಟಣದ ಮೂಲಕ ಹಾದುಹೋಗುವ ಖಾಸಗಿ ಬಸ್ಸಿನ ಸಂಖ್ಯೆ 25 ಆಗಿದೆ. ಇದೇ ಸಮಯದಲ್ಲಿ ವಿದ್ಯಾರ್ಥಿಗಳು ಕೊರಟಗೆರೆ ಮತ್ತು ತುಮಕೂರು ನಗರಕ್ಕೆ ವ್ಯಾಸಂಗಕ್ಕೆ ತೆರಳುತ್ತಾರೆ.

ಆದರೇ ಪಾವಗಡ ಮತ್ತು ಮಧುಗಿರಿ ಡಿಫೋದಿಂದ ಪ್ರತಿದಿನ ಹೊರಡುವ ಬಸ್ಸುಗಳ ಇಲಾಖೆಯ ಅಂಕಿಅಂಶ 20ಕ್ಕೂ ಹೆಚ್ಚಿದೆ ಆದರೇ ಕೊರಟಗೆರೆ ಸರಕಾರಿ ಬಸ್ ನಿಲ್ದಾಣದ ಮೂಲಕ ಹಾದುಹೋಗುವ ಬಸ್ಸಿನ ಸಂಖ್ಯೆ ಕೇವಲ 5 ರಿಂದ 6 ಮಾತ್ರ..

ಕೇವಲ 6 ಬಸ್ಸಿನಲ್ಲಿ ಅಷ್ಟೊಂದು ಮಟ್ಟದ ವಿದ್ಯಾರ್ಥಿಗಳು ಪ್ರಯಾಣಿಸಲು ಸಾಧ್ಯವೇ ಇದು ಗೊತ್ತೀರುವ ಸಾರಿಗೆ ಇಲಾಖೆ ಮೌನ ಆಗಿರಲು ಕಾರಣವೇನು ಎಂಬುದೇ ಯಕ್ಷ ಪ್ರಶ್ನೆ..??? ಇದಕ್ಕೆ ಸಾರಿಗೆ ಇಲಾಖೆಯೇ ಉತ್ತರ ನೀಡಬೇಕು ಎಂದು ವಿದ್ಯಾರ್ಥಿಗಳು ತಮ್ಮ ಗೊಳನ್ನ ತೊಡಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos