ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ಪ್ರಿನ್ಸಿಪಾಲ್ ಅಂಟೋನಿ!

ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ಪ್ರಿನ್ಸಿಪಾಲ್ ಅಂಟೋನಿ!

ಹಾಸನ, ಮೇ.9, ನ್ಯೂಸ್ ಎಕ್ಸ್ ಪ್ರೆಸ್:  ಶಿಕ್ಷಕರು ಅಂದ್ರೆ ಮಕ್ಕಳಿಗೆ ತಿದ್ದಿ ಬುದ್ದಿ ಹೇಳಬೇಕಾದ ಗುರುಗಳು. ಆದ್ರೆ ಅವರೇ ತಪ್ಪು ಮಾಡಿದ್ರೆ ಹೇಗೆ….? ಇಂತಹ ಒಂದು ಘಟನೆ ಹಾಸನದಲ್ಲಿ ನಡೆದಿದೆ. ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಪ್ರಿನ್ಸಿಪಾಲ್‍ ತನ್ನ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಚನ್ನರಾಯಪಟ್ಟಣದ ಕ್ರೈಸ್ಟ್ ಪಿಯು ಕಾಲೇಜ್‍ ಪ್ರಿನ್ಸಿಪಾಲ್ ಆಂಟೋನಿ ಅಸಭ್ಯವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರತಿವರ್ಷ ಕಾಲೇಜಿನಿಂದ ಪ್ರವಾಸಕ್ಕೆ ಹೋಗುವಂತೆ, ಈ ವರ್ಷವೂ ಕಾಲೇಜು ವಿದ್ಯಾರ್ಥಿಗಳ ಜೊತೆ ಆಂಟೋನಿ ಗೋವಾ ಪ್ರವಾಸಕ್ಕೆ ಹೋಗಿದ್ರು. ಅಲ್ಲಿ ವಿದ್ಯಾರ್ಥಿಗಳ ಜೊತೆ ಡಾನ್ಸ್ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿನಿಯೊಬ್ಬಳ ತೊಡೆ ಮೇಲೆ ಮಲಗಿರುವ ಫೋಟೋ ಹಾಗೂ ವಿಡಿಯೋ ಮೂರು ತಿಂಗಳ ನಂತರ ವೈರಲ್‍ ಆಗಿವೆ. ಈ ವಿಡಿಯೋ ನೋಡಿದ ಪೋಷಕರು ಪ್ರಿನ್ಸಿಪಾಲ್ ವಿರುದ್ಧ ಕಿಡಿಕಾರಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos