ಗಗನಕ್ಕೇರಿದ ನಿಂಬೆಹಣ್ಣಿನ ಬೆಲೆ

ಗಗನಕ್ಕೇರಿದ ನಿಂಬೆಹಣ್ಣಿನ ಬೆಲೆ

ಬೆಂಗಳೂರು: ಬೇಸಿಗೆಯಲ್ಲಿ ನಿಂಬೆ ಹಣ್ಣಿಗೆ ಬೇಡಿಕೆ ಕೂಡ ಹೆಚ್ಚಾಗಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆಯಿಲ್ಲ. ಕಳೆದ ಕೆಲವು ದಿನಗಳಿಂದ ನಿಂಬೆ ಹಣ್ಣಿನ ಕೊರತೆ ತೀವ್ರವಾಗಿದ್ದು, ಉತ್ತರ ಕರ್ನಾಟಕ ಮತ್ತು ಇತರ ಪ್ರದೇಶಗಳಿಂದ ಸಣ್ಣ ಪ್ರಮಾಣದಲ್ಲಿ ನಿಂಬೆ ಹಣ್ಣು ಮಾರುಕಟ್ಟೆಗೆ ಬರುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.ದಾಸ್ತಾನು ಬೇಗನೇ ಖಾಲಿಯಾಗುತ್ತಿದ್ದು, ಬೇಡಿಕೆ ಹೆಚ್ಚಾಗುತ್ತಿದೆ.

ಈ ಬೇಸಿಗೆಯಲ್ಲಿ ಹೊರ ಹೋಗಿ ಬಂದರೆ ಸಾಕು ಫುಲ್ ಸುಸ್ತು. ಮನೆಗೆ ಬಮದ ಕೂಡಲೆ ತಣ್ಣಗೆ ನಿಂಬೆ ಹಣ್ಣಿನ ಶರಬತ್ತು ಕುಡಿಯಬೇಕು ಎನಿಸಿದರೇ ಈಗ ಅದೂ ಕೂಡ ಆಗುವುದಿಲ್ಲ!. ಏಕೆಂದರೆ ದಿನ ದಿನಕ್ಕೂ ಗಗನಕ್ಕೆ ಏರುತ್ತಿದೆ ನಿಂಬೆ ಹಣ್ಣಿನ ಬೆಲೆ.ಸದ್ಯ ಬೆಂಗಳೂರಿನಲ್ಲಿ ನಿಂಬೆ ಹಣ್ಣಿನ ಬೆಲೆ ಇವತ್ತು ಇದ್ದಂತೆ ನಾಳೆ ಇರುವುದಿಲ್ಲ.

ಬೇಸಿಗೆಯ ಬಿಸಿಲಿಗೆ ನಾಲಿಗೆಗೆ ತಂಪಾದ ನಿಂಬೆ ಶರಬತ್ತು ಬಿದ್ರೆ ಸಾಕು ದೇಹ ತಂಪಾದಂತಾಗುತ್ತೆ.. ಆದ್ರೆ.. ಶರಬತ್ತು, ಲೈಮ್ ಸೋಡಾ ಕುಡಿಯುವುದು ಅಂದುಕೊಂಡಷ್ಟು ಸುಲಭವಲ್ಲ. ಒಂದು ಕೆಜಿ ಟೊಮೆಟೋ ಬೆಲೆಗೆ ಒಂದೇ ಒಂದು ನಿಂಬೆ ಹಣ್ಣು ಸಿಗುವಂತಾಗಿದೆ ಪರಿಸ್ಥಿತಿ. ಒಂದು ಕೆಜಿ ಟೊಮೆಟೋ ಬೆಲೆ 10 ರಿಂದ 12 ರೂಪಾಯಿಯಿದೆ. ಹಾಗೆ ಒಂದು ನಿಂಬೆ ಹಣ್ಣಿನ ಬೆಲೆ ಕೂಡ 12 ರೂಪಾಯಿಯಾಗಿದೆ. ಇದು ಗ್ರಾಹಕರ ಜೇಬಿಗೆ ಕತ್ತರಿ ಹಾಕಿದಂತಾಗಿದೆ..

ಪ್ರತಿ ನಿಂಬೆ ಹಣ್ಣಿನ ಬೆಲೆ 8 ರಿಂದ 12 ರೂ.ಗಳ ನಡುವೆ ಇದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ನಿಂಬೆಹಣ್ಣಿನ ಗಮನಾರ್ಹ ಕೊರತೆ ಉಂಟಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಹಣ್ಣು ದೊರಕದೆ ಇರುವುದು ಕೂಡ ಬೆಲೆ ಹೆಚ್ಚಾಗಲು ಕಾರಣವಾಗಿದೆ.ಮೊದಲು ಎರಡು ರೂಪಾಯಿಗೆ ಹತ್ತು ರೂಪಾಯಿಗೆ ನಾಲ್ಕು ಸಿಗುತ್ತಿದ್ದ ನಿಂಬೆಹಣ್ಣುಗಳು ಈಗ 8, 9, 10 ಮತ್ತು 12 ರೂಪಾಯಿಗೆ ತಲುಪಿದೆ. ಸಣ್ಣ ಸೈಜಿನ ನಿಂಬೆ ಹಣ್ಣಿಗೆ 8 ರೂಪಾಯಿಯಿದ್ದರೇ, ದೊಡ್ಡ ಗಾತ್ರದ ನಿಂಬೆಹಣ್ಣಿಗೆ 12 ರೂಪಾಯಿಯಾಗುತ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos