ಪ್ರೇಮ ವಿವಾಹವಾಗಿ 3 ವರ್ಷದ ನಂತರ ಮನೆಗೆ ಬಂದ ಮಗಳು: ಆತ್ಯೆಹತ್ಯೆ ಮಾಡಿಕೊಂಡ ತಂದೆ

ಪ್ರೇಮ ವಿವಾಹವಾಗಿ 3 ವರ್ಷದ ನಂತರ ಮನೆಗೆ ಬಂದ ಮಗಳು: ಆತ್ಯೆಹತ್ಯೆ ಮಾಡಿಕೊಂಡ ತಂದೆ

ನಾಗರ್​ಕರ್ನೂಲ್​: ಪ್ರೇಮ ವಿವಾಹ 
ಮಾಡಿಕೊಂಡು ಮೂರು ವರ್ಷಗಳ ಬಳಿಕ ಮಗಳು ತವರು ಮನೆಗೆ ಬಂದ್ದಿದ್ದಳು. ಇದರಿಂದ ನೊಂದ ತಂದೆ
 ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ
ಘಟನೆ ತೆಲಂಗಾಣದ ನಾಗರ್​ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ.

ನಾಗರ್ ಕರ್ನೂಲ್ ಜಿಲ್ಲೆಯ ಕೊಟ್ರಾ ಗ್ರಾಮದ ನಿವಾಸಿ ಚಿಟ್ಟಿ ಲಕ್ಷ್ಮಮ್ಮ, ಶ್ರೀಶೈಲಂ (45) ದಂಪತಿಗಳ ಹಿರಿಯ ಮಗಳು ಮೂರು ವರ್ಷಗಳ ಹಿಂದೆ ತಮ್ಮದೇ ಗ್ರಾಮದ ಯುವಕನ ಜೊತೆ ಪ್ರೇಮ ವಿವಾಹವಾಗಿದ್ದಳು. ಇದನ್ನು ವಿರೋಧಿಸಿದ್ದ ಯುವತಿಯ ತಂದೆ ‘ನೀನು ಮತ್ತೆ ನಮ್ಮ ಮನೆಯ ಮೆಟ್ಟಿಲು ತುಳಿದ್ರೆ, ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಎಚ್ಚರಿಸಿದ್ದರಂತೆ. ಈ ಕಾರಣಕ್ಕೆ ಮೂರು ವರ್ಷಗಳಿಂದಲೂ ಮನೆಯ ಮೆಟ್ಟಿಲನ್ನು ಮಗಳು ತುಳಿದಿರಲಿಲ್ಲ ಎನ್ನಲಾಗ್ತಿದೆ.

ಮೂರು ವರ್ಷಗಳ ನಂತರ ಮನೆಗೆ ಬಂದ ಮಗಳ ಮೇಲೆ ತಂದೆ ಶ್ರೀಶೈಲಂ ಸಿಡಿಮಿಡಿಗೊಂಡಿದ್ದರು.  ಮನಸ್ತಾಪಕ್ಕೆ ಗುರಿಯಾಗಿದ್ದ ಶ್ರೀಶೈಲಂ ಅದೇ ರಾತ್ರಿ ಮನೆಯ ಎದುರಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ ಮನೆಯ ಮುಂದೆ ತಂದೆ ಶವ ನೋಡಿದ ಮಗಳಿಗೆ ಶಾಕ್​ ಆಗಿದೆ. ಮನೆಯ ಹಿರಿಯನನ್ನು ಕಳೆದುಕೊಂಡ ಕುಟುಂಬದಲ್ಲಿ ಈಗ ನೀರವ ಮೌನ ಆವರಿಸಿದೆ. ಪ್ರಕರಣವು ಪೊಲೀಸ್
ಠಾಣೆಯಲ್ಲಿ ದಾಖಲಾಗಿದೆ. 

ಫ್ರೆಶ್ ನ್ಯೂಸ್

Latest Posts

Featured Videos