25ನೇ ಚಿತ್ರದ ತಯಾರಿಯಲ್ಲಿ ಪ್ರೇಮ್

25ನೇ ಚಿತ್ರದ ತಯಾರಿಯಲ್ಲಿ ಪ್ರೇಮ್

ಬೆಂಗಳೂರು.ಮಾ.16, ನ್ಯೂಸ್ ಎಕ್ಸ್ ಪ್ರೆಸ್: ‘ಪ್ರಾಣ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟ ಪ್ರೇಮ್ ಕುಮಾರ್. ನಂತರ ನಟಿಸಿದ ‘ನೆನಪಿರಲಿ’, ‘ಜೊತೆ ಜೊತೆಯಲಿ’ ಹಾಗೂ ‘ಪಲ್ಲಕ್ಕಿ’ ಚಿತ್ರಗಳು ಯಶಸ್ವಿಯಾದವು. ಹಾಗೆಯೇ ಪ್ರೇಕ್ಷಕರ ಮನಸ್ಸನ್ನು ಗೆದ್ದರು. ವಿಶೇಷವೆಂದರೆ, ಈಗ ಅವರು 25 ನೇ ಚಿತ್ರದ ಸಿದ್ದತೆಯಲ್ಲಿದ್ದಾರೆ.

ಹೌದು , ‘ನೆನಪಿರಲಿ’ ಪ್ರೇಮ್ ಅತಿ ಕಡಿಮೆ ಅವಧಿಯಲ್ಲಿಯೇ 24 ಚಿತ್ರಗಳನ್ನು ಪೂರೈಸಿದ್ದು, 25 ನೇ ಚಿತ್ರದತ್ತ ಗಮನ ಹರಿಸಿದ್ದಾರೆ. ಈಗಾಗಲೇ ಚಿತ್ರವು ಶುರುವಾಗುತ್ತಿದ್ದು, ಚಿತ್ರಕ್ಕೆ ನ್ಯೂರೋಲಾಜಿಸ್ಟ್ ಆಗಿರುವ ಡಾ. ರಾಘವೇಂದ್ರ ಆಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಪ್ರೇಮ್ ನಾಲ್ಕು ವಿಭಿನ್ನ ಬಗೆಯ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos