ಪ್ರಜ್ವಲ್ ರೇವಣ್ಣ ಗೆ ಕಂಟಕವಾದ ಬಿಜೆಪಿ ಅಭ್ಯರ್ಥಿ

ಪ್ರಜ್ವಲ್ ರೇವಣ್ಣ ಗೆ ಕಂಟಕವಾದ ಬಿಜೆಪಿ ಅಭ್ಯರ್ಥಿ

ಹಾಸನ, ಜೂ.21: ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಅಭ್ಯರ್ಥಿಗಳ ಸಂಪೂರ್ಣ ಆಸ್ತಿ ವಿವರ ಸಲ್ಲಿಸಿರುವುದು ಗೊತ್ತಿರುವಂತಹ ವಿಷಯವೇ.. ಆದರೆ ಕೆಲವರು ಸುಳ್ಳು ಆಸ್ತಿ ವಿವರವನ್ನು ಸಲ್ಲಿಸುತ್ತಾರೆ. ಇದೀಗ ಹಾಸನ ಲೋಕಸಭಾ ಅಭ್ಯರ್ಥಿಯ ಮೇಲೂ ಕೂಡ ಇದೇ ಆರೋಪ ಕೇಳಿ ಬರುತ್ತಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆಸ್ತಿ ವಿವರಗಳನ್ನು ಬಚ್ಚಿಟ್ಟು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪ್ರಮಾಣ ವಚನ ಬೋಧನೆ ಮಾಡಬಾರದು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಎ.ಮಂಜು ಆಗ್ರಹಿಸಿದ್ದಾರೆ.

ಎ.ಮಂಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಜ್ವಲ್ ರೇವಣ್ಣ ಅವರ ಪ್ರಮಾಣ ಪತ್ರದಲ್ಲಿ ಸಾಕಷ್ಟು ದೋಷಗಳಿವೆ. ಹೀಗಾಗಿ ಪ್ರಜ್ವಲ್ ರೇವಣ್ಣ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಿ ಶುಕ್ರವಾರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದೇನೆ ಎಂದು ತಿಳಿಸಿದ್ದಾರೆ.. ಪ್ರಜ್ವಲ್ ರೇವಣ್ಣ ಅವರಿಗೆ 2008 ರಿಂದ ಆದಾಯವಿದ್ದರೂ 2018-19 ನೇ ಸಾಲಿನ ಆದಾಯ ತೆರಿಗೆ ವಿವರವನ್ನು ಮಾತ್ರ ನೀಡಿದ್ದಾರೆ. ಅವರ ಖಾತೆಗೆ ಸುಮಾರು 10 ಕೋಟಿಗೂ ಹೆಚ್ಚು ಹಣ ಬಂದಿದೆ. ಹಲವು ಕಡೆ ಭೂಮಿ ಖರೀದಿಸಿ ಬ್ಯಾಂಕ್ ನಿಂದಲೇ ಹಣ ಪಾವತಿಸಿರುವ ದಾಖಲೆಗಳು ಇವೆ. ಪ್ರಜ್ವಲ್ ಅವರು ಪಿಯುಸಿ ಓದುತ್ತಿರುವಾಗಲೇ 3 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದ್ದ ದಾಖಲೆಯೂ ಇದೆ. ಈ ಅಂಶಗಳನ್ನು ಮರೆಮಾಚಿದ್ದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಸಂಕಷ್ಟ ಒದಗಿ ಬಂದಿದೆ. ಇದನ್ನು ಯಾವ ರೀತಿ ನಿಭಾಯಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

ಫ್ರೆಶ್ ನ್ಯೂಸ್

Latest Posts

Featured Videos