ಪ್ರಯಾಗ್ರಾಜ್ ನಿಂದ ಪ್ರಚಾರಾರಂಭಾ: ಪ್ರಿಯಾಂಕಾ

ಪ್ರಯಾಗ್ರಾಜ್ ನಿಂದ ಪ್ರಚಾರಾರಂಭಾ: ಪ್ರಿಯಾಂಕಾ

ಲಕ್ನೋ, ಮಾ. 18, ನ್ಯೂಸ್ ಎಕ್ಸ್ ಪ್ರೆಸ್: ಏಪ್ರಿಲ್ ನಲ್ಲಿ ನಡೆಯಲಿರುವ ಲೋಕಸಭಾ ಚುನಾವಣಾ ಪ್ರಚಾರವನ್ನು ಇಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದಾ ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶದಲ್ಲಿನ ತಮ್ಮ 3 ದಿನಗಳ ಪ್ರಚಾರವನ್ನು ಪ್ರಯಾಗ್ರಾಜ್ ನಿಂದ ಆರಂಭಿಸಿದರು.

ಈ ಅಭಿಯಾನದಲ್ಲಿ ಪ್ರಿಯಾಂಕಾ ಗಾಂಧಿ 4 ಜಿಲ್ಲೆಗಳಾದ ಪ್ರಯಾಗ್ರಾಜ್, ಭಡೋಹಿ, ಮಿರ್ಜಾಪುರ ಮತ್ತು ವಾರಾಣಸಿಯನ್ನು ಒಳಗೊಳಿಸಿಕೊಂಡ ಅಂತಿಮವಾಗಿ ವಾರಾಣಸಿಯ ಅಸ್ಸೀ ಘಾಟ್ ಮತ್ತು ದಶಾಶ್ವಮೇಧ ಘಾಟ್ನಲ್ಲಿ ಮಾ,20ರಂದು ಅಭಿಯಾನವನ್ನು ಕೊನೆಗೊಳಿಸುವರು.

ಕಾಲ್ನಡಿಗೆ, ಕಾರು ಮತ್ತು ಸ್ಟೀಮರ್ ಬೋಟ್ಗಳ ಮೂಲಕ ಪ್ರಿಯಾಂಕಾ ಅವರು 140 ಕಿ.ಮೀ. ಮಾರ್ಗವನ್ನು ಕ್ರಮಿಸುವರು. ಪ್ರಿಯಾಂಕಾ ತಮ್ಮ ಈ ಅಭಿಯಾನವನ್ನು ಕೈಗೊಳ್ಳುವ 4 ಜಿಲ್ಲೆಗಳ ಆದ್ಯಂತ ರಾಹುಲ್ ಜತೆಗಿನ ಆಕೆಯ ಪೋಸ್ಟರ್ ಗಳು ರಾರಾಜಿಸುತ್ತಿವೆ.

ಜನರ ಕೈಗೆ ಉದ್ಯೋಗ, ಬಡ ರೈತರ ಸಾಲ ಮನ್ನಾ ಮುಂತಾಗಿ ನೀಡಲಾಗಿರುವ ಭರವಸೆಗಳನ್ನು ತನ್ನ ಸಹೋದರ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಡೇರಿಸುವರು ಎಂಬ ಭರವಸೆಯನ್ನು ಪ್ರಿಯಾಂಕಾ ಈ ಸಂದರ್ಭದಲ್ಲಿ ತಾನು ಭೇಟಿಯಾದ ಜನಸಮೂಹಕ್ಕೆ ನೀಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos