ಪ್ರವಾಹಕ್ಕೆ ಸಿಲುಕಿದ್ದ ಹಸುಗಳಿಗೆ ಮೇವು ರವಾನೆ

ಪ್ರವಾಹಕ್ಕೆ ಸಿಲುಕಿದ್ದ ಹಸುಗಳಿಗೆ ಮೇವು ರವಾನೆ

ದೇವನಹಳ್ಳಿ, ಆ. 16: ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಸಿಲುಕಿದ ಸಂತ್ರಸ್ತರಿಗೆ ಸದ್ಯಕ್ಕೆ ಅವಶ್ಯಕವಾಗಿ ಬೇಕಿರುವುದು ದಿನಬಳಕೆಯ ಅಗತ್ಯ ವಸ್ತುಗಳು ಹಾಗೂ ನೀರು-ಆಹಾರ. ಅದರ ಜೊತೆಯಲ್ಲಿ ದನಕರುಗಳಿಗೆ ಮೇವು ಇಲ್ಲದೇ ಪರದಾಟ ನಡೆಸುತ್ತಿವೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಕಡೆಗಳಿಂದ ನೆರವು ನೀಡುತ್ತಿದ್ದಾರೆ. ಇದರ ಜೊತೆಯಲ್ಲಿ ಬೆಂಗಳೂರು ಉತ್ತರ ಬ್ಯಾಟರಾಯನಪುರ ಕ್ಷೇತ್ರದ ನವರತ್ನ ಅಗ್ರಹಾರದ ಗ್ರಾಮದ ಜನರು ನೆರೆ ಸಂತ್ರಸ್ತರ ನೆರವಿಗೆ ದಾವಿಸಿದ್ದಾರೆ. ಗ್ರಾಮದ ಮುಖಂಡ ಹಾಗೂ ದೊಡ್ಡಜಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹೇಶ್‌ ಕುಮಾರ್ ಸುಮಾರು ಎಂಟು ಒಂಬತ್ತು ಲಕ್ಷದ ಸರಕನ್ನು ಬಾದಮಿ ಕ್ಷೇತ್ರದ ಸಂತ್ರಸ್ತರಿಗೆ ನೀಡುತ್ತಿದ್ದಾರೆ.

ಅಂದಹಾಗೆ ಬಟ್ಟೆ, ಅಕ್ಕಿ, ಆಹಾರ ಸಾಮಾಗ್ರಿಗಳು, ಕೆಲ ಪದಾರ್ಥಗಳು ಮತ್ತು ದನಕರುಗಳಿಗೆ ಬೇಕಾದ ಮೇವನ್ನು ಕಳುಹಿಸಿಕೊಟಲಾಗಿದೆ. ಆಹಾರ ಪದಾರ್ಥಗಳು ಎಚೆತ್ತವಾಗಿ ಉತ್ತರ ಕರ್ನಾಟಕದ ಕಡೆ ತೆರಳುತ್ತಿದ್ದು, ದನಕರುಗಳು ಪರಿತಪ್ಪಿಸುತ್ತಿವೆ. ಹೀಗಾಗಿ ಮೂರು ಎಕರೆ ಪ್ರದೇಶದಲ್ಲಿ ಜೋಳದ ಕಡ್ಡಿಯನ್ನ ಖರೀದಿಸಿರುವ ಮಹೇಶ್‌ ಕುಮಾರ್ ಗ್ರಾಮಸ್ಥರನ್ನ ಕರೆದುಕೊಂಡು ಹೋಗಿ ಜೋಳವನ್ನ ಕಾಟಾವು ಮಾಡಿಕೊಂಡು ಬಂದಿದ್ದಾರೆ. ಅಲ್ಲದೆ ಇಲ್ಲಿಂದ ಎರಡು ಲಾರಿ ಟ್ರಕ್‌ ನಲ್ಲಿ ಬಾದಾಮಿಗೆ ತೆಗೆದುಕೊಂಡು ಹೋಗಲಾಗಿದೆ. ಅದರ ಜೊತೆಯಲ್ಲಿ ಗ್ರಾಮದ ಸುಮಾರು ಇಪ್ಪತ್ತು ಜನರು ಲಾರಿಗಳಲ್ಲಿ ಹೋಗಿದ್ದು, ಸ್ವತಃ ಅವರೇ ಸಂತ್ರಸ್ತರಿಗೆ ನೀಡಲಿದ್ದಾರೆ. ಇನ್ನೂ ಯಾವ್ಯಾವ ಬಾದಾಮಿಯಲ್ಲಿ ಸಮಸ್ಯೆಯಾಗಿಯೋ ಅಲ್ಲಿ ನಾವೇ ವಿತರಿಸಿ ಬರುತ್ತೇವೆ ಅಂತಾ ಮಹೇಶ್‌ ಕುಮಾರ್ ಮಾದ್ಯಮಗಳಿಗೆ ತಿಳಿಸಿದ್ರು.

ಫ್ರೆಶ್ ನ್ಯೂಸ್

Latest Posts

Featured Videos