ಪ್ರತಿ ಮನೆಗಳಲ್ಲಿ ಮಳೆ ಕೊಯ್ಲು ಅಳವಡಿಸಿ ಕಾಲ್ನಡಿಗೆ ಜಾಥ

ಪ್ರತಿ ಮನೆಗಳಲ್ಲಿ ಮಳೆ ಕೊಯ್ಲು ಅಳವಡಿಸಿ ಕಾಲ್ನಡಿಗೆ ಜಾಥ

ಕೆ.ಆರ್.ಪುರ, ಜು .9 : ಮುಂದಿನ ಪೀಳಿಗೆಗೆ ಜಲಮೂಲಗಳನ್ನು ಸಂರಕ್ಷಿಸಿ ಪ್ರತಿ ಮನೆಗಳಲ್ಲಿ ಮಳೆ ಕೊಯ್ಲು ಅಳವಡಿಸಿಕೊಳ್ಳಬೇಕೆಂದು ವೈಟ್ ಫೀಲ್ಡ್ ನ ಡೀನ್ ಶಾಲೆಯ ಮಕ್ಕಳು ಕಾಲ್ನಡಿಗೆ ಜಾಥ ನಡೆಸಿದರು.

ಮಹಾದೇವಪುರದ ಹೋಪ್ ಫಾರಂನಿಂದ ಆರಂಭವಾದ ಕಾಲ್ನಡಿಗೆ ಜಾಥ ವೈಟ್ ಫೀಲ್ಡ್ ವರೆಗೆ ಸಾಗಿತು. ಶಾಲೆಯ ಮಕ್ಕಳು ರಸ್ತೆಯುದ್ದಕ್ಕೂ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಳೆ ಕೊಯ್ಲು ಕುರಿತ ಕರಪತ್ರ ಹಂಚಿದರು.

ಕಾಡನ್ನು ಉಳಿಸಿ ನಾಡನ್ನು ಬೆಳೆಸಿ, ಹೆಚ್ಚುತ್ತಿರುವ ತಾಪಮಾನಕ್ಕೆ ಮನೆಗೊಂದು ಸಸಿ ನೆಡಿ, ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ, ನೀರನ್ನು ಮಿತವಾಗಿ ಬಳಸಿ ಎನ್ನುವ ಬಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗಿದರು.

ಪ್ರಸ್ತುತ ದಿನಗಳಲ್ಲಿ ಜಲಮೂಲಗಳನ್ನು ಸಂರಕ್ಷಿಸಿದೆ ಇರುವುದರಿಂದ ಮಳೆ ಕಡಿಮೆಯಾಗುತ್ತಿದೆ. ಇನ್ನೂ ಕೆಲವೇ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಅಹಕಾರ ಆರಂಭವಾಗಲಿದೆ. ನಗರದಲ್ಲಿ ಕೆರೆಗಳನ್ನು ಸಂರಕ್ಷಿಸದೆ ಇರುವುದರಿಂದ ಜಲಮೂಲಗಳು ಅವಸಾನ ಅಂಚಿಗೆ ತಲುಪಿದೆ. ಮನೆಗಳಲ್ಲಿ ಬೊರ್ವೆಲ್ಗಳಲ್ಲಿ ನೀರಿಲ್ಲ. ಸಾರ್ವಜನಿಕರು ನೀರಿನ ಮಿತವಾದ ಬಳಕೆ ಮಾಡುತ್ತಿಲ್ಲ. ಈ ಎಲ್ಲಾ ಅಂಶಗಳನ್ನು ಮನಗಂಡು ಸಾರ್ವಜನಿಕರಲ್ಲಿ ಜಲಮೂಲಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಲ್ನಡಿಗೆ ಜಾಥ ಹಮ್ಮಿಕೊಂಡಿದ್ದೆವೆ ಎಂದು ವಿದ್ಯಾರ್ಥಿನಿ ಸೌಜನ್ಯ ತಿಳಿಸಿದರು.

ಬೆಂಗಳೂರು ನಗರ ಬೃಹದಾಕಾರವಾಗಿ ಬೆಳೆಯುತ್ತಿದೆ. ಬೆಳೆಯುತ್ತಿರುವ ನಗರಕ್ಕೆ ಅಗತ್ಯವಾಗಿ ಬೇಕಾಗಿರುವ ಜಲಮೂಲಗಳನ್ನು ಸಂರಕ್ಷಿಸಲು ಸಾರ್ವಜನಿಕರು ಮನಸ್ಸು ಮಾಡುತ್ತಿಲ್ಲ. ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ನೀರಿಗೆ ಪರಿತಪಿಸುವ ವರದಿಗಳನ್ನು ನೋಡುತ್ತಿದ್ದೇವೆ. ಇದೆಕ್ಕೆಲ್ಲ ಪರಿಹಾರವಾಗಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಹೆಚ್ಚಾಗಿ ಮಾಡಬೇಕಾಗಿದೆ ನಮ್ಮ ಶಾಲೆಯಿಂದ ಕೂಡ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಶಾಲೆಯ ವಿದ್ಯಾರ್ಥಿ ಮನೋಜ್ ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos