ಪ್ರತಿಭಟನಾ ಮನೋಭಾವ ಕಡಿಮೆ: ಗುಂಡಣ್ಣ ಬೇಸರ

ಪ್ರತಿಭಟನಾ ಮನೋಭಾವ ಕಡಿಮೆ: ಗುಂಡಣ್ಣ ಬೇಸರ

ಬೆಂಗಳೂರು, ಜು. 15 : (ಮಾಸ್ಟರ್ ಹಿರಣ್ಣಯ್ಯ ಮಹಾ ವೇದಿಕೆ) ‘’ ರಾಜಕೀಯ ಸನ್ನಿವೇಶದಲ್ಲಿ ಹೆಚ್ಚುತ್ತಿರುವ ಕೋಮುವಾದಿ,ಚಿಂತನೆ, ರೈತರ ಆತ್ಮಹತ್ಯೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸ್ಪಂದಿಸಲು ಕಲಾ ತಂಡಗಳಿಗೆ ಅವಕಾಶವಿದೆ. ಪ್ರತಿಭಟನಾ ಮನೋಭಾವ ಕಡಿಮೆಯಾಗುತ್ತಿದೆ ಎಂದು ಹಿರಿಯ ರಂಗಕರ್ಮಿ ಸಿಕೆ. ಗುಂಡಣ್ಣ ಬೇಸರ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳದ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ತುರ್ತು ಪರಿಸ್ಥಿತಿ ಸೇರಿದಂತೆ ದೇಶಕ್ಕೆ ಸಂಕಷ್ಟ ಒದಗಿ ಬಂದ ವಿವಿಧ ಸಂದರ್ಭದಲ್ಲಿ ರಂಗ ತಂಡಗಳು ನಾಟಕದ ಮೂಲಕವೇ ಪ್ರತಿಭಟನೆ ನಡೆಸಿವೆ. ಏಣಗಿ ಬಾಳಪ್ಪ ಅವರು, ನಾಟಕಗಳಲ್ಲಿ ಬ್ರಿಟೀಷರಿಗೆ’ ಕೆಂಪು ಕೋತಿ’ ಎಂಬ ಪದ ಬಳಕೆ ಮಾಡುತ್ತಿದ್ದರು. ಈ ಪದ ಜನರನ್ನು ಬಡಿದೆಬ್ಬಿಸಲು ಸಹಾಯಕವಾಗಿತ್ತು. ಇದರ ಗಂಭೀರತೆ ಅರಿತ ಬ್ರಿಟಿಷರು ಆ ಪದ ಬಳಕೆ ಮಾಡದಂತೆ ಎಚ್ಚರಿಸಿದ್ದರು ಎಂದು ತಿಳಿಸಿದರು. ‘ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಮಗ್ರ ಮಂಥನ ಸೇರಿದಂತೆ ವಿವಿಧ ನಾಟಕ ಜರನ್ನು ಜಾಗೃತಗೊಳಿಸಿದವು. ಅದೇ ರೀತಿ ಶೋಷಿತ ವರ್ಗದ ಪರವಾಗಿ ಕೂಡ ಸಮಸ್ಯೆಗಳ ಗಂಭೀರತೆ ದರ್ಶನ ಮಾಡಿಸುವಲ್ಲಿ ಪ್ರಬಲ ಮಾಧ್ಯಮಗಳಾಗಿದ್ದವು ಎಂದರು. ಸಾಹಿತ್ಯ ಸಮ್ಮೇಳನವನ್ನು ರಂಗಭೂಮಿಗೆ ಅರ್ಪಿಸಿದ ಹಿನ್ನಲೆ ರಂಗಭೂಮಿ ಸಾಧಕರಿಗೆ ಕನ್ನಡ ಸೇವಾರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತ್ತು. ಟಿಜಿ ,ಹರೀಶ್, ಎನ್ ಧನುಷ್, ದೊ. ರಾಮಚಂದ್ರಯ್ಯ, ಎಚ್ ಜಿ. ಶಿವಲಿಂಗಮೂರ್ತಿ,ಜಿ ಮುರಳಿ,ಪಿ ರುದ್ರಪ್ಪ ಸೇರಿದಂತೆ 80ಕ್ಕೂ ಅ ಧಿಕ ರಂಗ ಕಲಾವಿರನ್ನು ಗೌರವಿಸಲಾಯಿತು

ಫ್ರೆಶ್ ನ್ಯೂಸ್

Latest Posts

Featured Videos