ಪ್ರತಿಯೊಬ್ಬರು 30ರ ನಂತರ ಆರೋಗ್ಯ ತಪಾಸಣೆ ಉತ್ತಮ

ಪ್ರತಿಯೊಬ್ಬರು 30ರ ನಂತರ ಆರೋಗ್ಯ ತಪಾಸಣೆ ಉತ್ತಮ

ಬೆಂಗಳೂರು, ಜೂ. 19: ಪ್ರತಿಯೊಬ್ಬರು 30 ರ ವಯಸ್ಸಿನ ನಂತರ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಮುಂದೆ ಆಗುವ ಬಹಳಷ್ಟು ಆರೋಗ್ಯ ತೊಂದರೆಗಳನ್ನು ತಪ್ಪಿಸಬಹುದಾಗಿದೆ ಎಂದು ಆನಂದ್ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿ ಟೆಕ್ನಿಕಲ್ ಡೈರೆಕ್ಟರ್ ಡಾ ಸುಜಯ ಪ್ರಸಾದ್ ಹೇಳಿದರು.

ಇಂದು ನಗರದ ದಾಸರಹಳ್ಳಿಯಲ್ಲಿರುವ ಪೀಪಲ್ ಟ್ರೀ ಅಟ್ ರಾಘವೇಂದ್ರ ಆಸ್ಪತ್ರೆಯಲ್ಲಿ ಹೊಸದಾಗಿ ಪ್ರಾರಂಭವಾಗಿರುವ ಆನಂದ್ ಡಯಾಗ್ನೋಸ್ಟಿಲ್ ಲ್ಯಾಬೊರೇಟರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 30 ನೇ ವಯಸ್ಸಿನ ನಂತರ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಇದರಿಂದಾಗಿ ರಕ್ತದೊತ್ತಡ, ಮಧುಮೇಹ ಹಾಗೂ ಇನ್ನಿತರೆ ಅರೋಗ್ಯ ಸಮಸ್ಯೆಗಳ ಬಗ್ಗೆ ಮುತುವರ್ಜಿ ವಹಿಸಬಹುದು. ಅಲ್ಲದೆ, ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗುವ ಸಮಯದಲ್ಲೇ ಅವುಗಳಿಗೆ ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗದಂತೆ ಕಾಪಾಡಬಹುದಾಗಿದೆ ಎಂದರು. ಆನಂದ್ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಯಂತ್ರೋಪಕರಣಗಳಿದ್ದು, ನಿಖರವಾದ ಫಲಿತಾಂಶವನ್ನು ನೀಡುತ್ತವೆ. ಅಲ್ಲದೆ ನಮ್ಮ ನುರಿತ ವೈದ್ಯರು ಹಾಗೂ ತಜ್ಞರು ನಿಖರವಾದ ಫಲಿತಾಂಶ ನೀಡುತ್ತಾರೆ ಎಂದು ಹೇಳಿದರು.

ನಂತರ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಬೆಂಗಳೂರು ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್ ಮುನಿರಾಜು ಮಾತನಾಡಿ, ಆನಂದ್ ಡಯಾಗ್ನೋಸ್ಟಿಕ್ ಲ್ಯಾಬ್ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಾ ಬಂದಿದೆ. ಈ ಭಾಗದ ಜನರು ಉತ್ತಮ ಸೇವೆಯನ್ನು ಪಡೆಯಲು ಅನುಕೂಲವಾಗುವಂತಹ ಪರಿಸರವನ್ನು ನಿರ್ಮಿಸಲಾಗಿದೆ ಎಂದು ಹೇಳಿದ ಅವರು ಡಾ.ಎ.ವಿ. ರಾಮಪ್ರಸಾದ್ ಅವರು 4 ದಶಕಗಳ ಹಿಂದೆ ಬೆಂಗಳೂರಿನ ಶಿವಾಜಿನಗರದಲ್ಲಿ ಡಯಾಗ್ನಾಸ್ಟಿಕ್ ಲ್ಯಾಬೊರೇಟರಿಯನ್ನು ಆರಂಭಿಸಿದ್ದರು. ಯಾವುದೇ ಒಂದು ವೈದ್ಯಕೀಯ ಪರೀಕ್ಷೆಗೆ ಲ್ಯಾಬೊರೇಟರಿ ಪರೀಕ್ಷೆಗಳಿಗೆ ಪ್ರಾಥಮಿಕ ಡಯಾಗ್ನಾಸ್ಟಿಕ್ ಮೂಲವಾಗಿರುತ್ತದೆ. 1974 ರಲ್ಲಿ ಎಲ್ಲರಿಗೂ ಗುಣಮಟ್ಟದ ಆರೋಗ್ಯರಕ್ಷಣೆ ಮಾಡುವ ಉದ್ದೇಶದಿಂದ ಈ ಆನಂದ್ ಡಯಾಗ್ನಾಸ್ಟಿಕ್ ಲ್ಯಾಬೊರೇಟರಿಯನ್ನು ಆರಂಭಿಸಲಾಗಿತ್ತು.

ಇಂದು, ಆನಂದ್ ಲ್ಯಾಬ್ ದೇಶದಲ್ಲಿ ಕ್ಷಿಪ್ರವಾಗಿ ಬೆಳೆಯುತ್ತಿರುವ ಮತ್ತು ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ಹೊಂದಿರುವ ಲ್ಯಾಬ್ ಗಳಲ್ಲಿ ಒಂದೆನಿಸಿದೆ. ಇತ್ತೀಚಿನ ಡಯಾಗ್ನಾಸ್ಟಿಕ್ ಮೆಡಿಸಿನ್, ನಿಖರವಾದ ಡಯಾಗ್ನಾಸಿಸ್ ಮತ್ತು ಚಿಕಿತ್ಸೆಗೆ ಪೂರಕವಾದ ರಿಪೋರ್ಟ್ಗಟಳನ್ನು ನೀಡಲಾಗುತ್ತದೆ. ಈ ಮೂಲಕ ಸಾರ್ವಜನಿಕರು ಮತ್ತು ಆಸ್ಪತ್ರೆಗಳ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos