ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲು!

ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲು!

ಮೈಸೂರು: ಸಿ ಎಂ ಸಿದ್ದರಾಮಯ್ಯನವರ ವಿರುದ್ಧ ಅವಹೇಳನಕಾರಿ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲಾಗಿದೆ ಪ್ರಮುಖವಾಗಿ ಮೈಸೂರು ದೇವರಾಜ್ ಪೊಲೀಸ್ ಠಾಣೆಯಲ್ಲಿ  fir ದಾಖಲಾಗಿರುವುದು. ಮೈಸೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ ಬಿ ಜೆ ವಿಜಯ್ ಕುಮಾರ್ ಕೊಟ್ಟಂತಹ ದೂರಿನ ಅನ್ವಯ ಎಫ್ಐಆರ್ ಅನ್ನ ದಾಖಲಿಸಿ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 1860ನ ಐಪಿಸಿ ಸೆಕ್ಷನ್ 504/153 ರ ಅಡಿಯಲ್ಲಿ ಪೊಲೀಸರು fir ಅನ್ನು ದಾಖಲಿಸಿಕೊಂಡಿದ್ದಾರೆ.  ಹುಣಸೂರಿನಲ್ಲಿ ನಡೆದಂತಹ ಹನುಮ ಜಯಂತಿ ಕಾರ್ಯಕ್ರಮದ ವೇಳೆ ಪ್ರತಾಪ್ ಸಿಂಹ ಅವರು ಆಡಿದಂತಹ ಮಾತು ಈಗ ಅವರಿಗೆ ಕಾನೂನು ಸಂಕಷ್ಟಕ್ಕೆ ಕಾರಣ ಆಗಬಹುದು ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos