‘ಅಣ್ಣಪ್ಪ’ನ ಸನ್ನಿಧಿಯಲ್ಲಿ ನೀರಿನ ಬವಣೆ!

‘ಅಣ್ಣಪ್ಪ’ನ ಸನ್ನಿಧಿಯಲ್ಲಿ ನೀರಿನ ಬವಣೆ!

ಧರ್ಮಸ್ಥಳ, ಮೇ. 18, ನ್ಯೂಸ್ ಎಕ್ಸ್ ಪ್ರೆಸ್ : ಆಗೊಂದು ಈಗೊಂದು ಮಳೆ ಬಿಟ್ಟರೆ ಬಿಸಿಲ ಬೇಗೆ ಏರುತ್ತಲೇ ಇದೆ. ಪುಣ್ಯಕ್ಷೇತ್ರಗಳಲ್ಲಿ ಯೂ ನೀರಿನ ಕೊರತೆ. ಕೆಲವು ಕ್ಷೇತ್ರಗಳಲ್ಲಂತೂ ಪುಣ್ಯಸ್ನಾನಕ್ಕೆ ನೀರು ಇಲ್ಲ. ಪ್ರಸಿದ್ಧ ಪುಣ್ಯಕ್ಷೇತ್ರ ಎನಿಸಿಕೊಂಡಿರುವ ಧರ್ಮಸ್ಥಳದಲ್ಲೂ ನೀರಿನ ಅಭಾವ ಕಂಡು ಬಂದಿದ್ದು, ನೀರಿನ ಕೊರತೆಯಿಂದ ಕೆಲ ದಿನಗಳ ಕಾಲ ಭಕ್ತರಿಗೆ ಪ್ರವಾಸ ಮುಂದೂಡುವಂತೆ ಡಾ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಿತ್ಯ ಅನ್ನದಾಸೋಹಕ್ಕೆ ಪ್ರತಿ ನಿತ್ಯ 3 ಲಕ್ಷ ಲೀ. ನೀರು ಅಗತ್ಯ.ಅನ್ನದಾಸೋಹಕ್ಕೆ ಸ್ಟೀಲ್ ತಟ್ಟೆಯ ಬದಲು ಎಲೆಗಳ ಬಳಕೆಗೆ ಆಡಳಿತ ಮಂಡಳಿ ಮುಂದಾಗಿದೆ. ನಿತ್ಯ 30ರಿಂದ 40ಸಾವಿರ ಭಕ್ತರಿಗೆ ಇಲ್ಲಿ ಅನ್ನ ದಾಸೋಹ  ನಡೆಯಲಿದ್ದು, ತಯಾರಿಗೆ ಭಾರೀ ಪ್ರಮಾಣದ ಶುದ್ದ ನೀರಿನ ಅಗತ್ಯವಿದೆ. ಜಲಮೂಲ ನೇತ್ರಾವತಿ ಬತ್ತಿದ್ದು, ತೀವ್ರ ಸಮಸ್ಯೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos