ಶ್ರೇಷ್ಟ ಕ್ರಿಕೆಟಿಗ ಪ್ರಶಸ್ತಿ ಮುಡಿಗೇರಿಸಿಕೊಂಡ ಕೊಹ್ಲಿ

ಶ್ರೇಷ್ಟ ಕ್ರಿಕೆಟಿಗ ಪ್ರಶಸ್ತಿ ಮುಡಿಗೇರಿಸಿಕೊಂಡ ಕೊಹ್ಲಿ

ನವದೆಹಲಿ, ಏ. 11, ನ್ಯೂಸ್ ಎಕ್ಸ್ ಪ್ರೆಸ್ ವಿರಾಟ್ ಕೊಹ್ಲಿಗೆ ಈ ಬಾರಿ ವಿಸ್ಡನ್ ಕ್ರಿಕೆಟರ್ಸ್ ಅಲ್ಮಾನಾಕ್ ಪ್ರಶಸ್ತಿ ಲಭಿಸಿದೆ. ನಾಯಕ ವಿರಾಟ್ ಕೊಹ್ಲಿ ಸತತ 3ನೇ ಬಾರಿಗೆ ಈ ಪ್ರಶಸ್ತಿಗೆ  ಆಯ್ಕೆಯಾಗಿದ್ದಾರೆ.

5 ಪ್ರಮುಖ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಕೂಡ ಸ್ಥಾನ ಪಡೆದಿದ್ದಾರೆ. ಪ್ರತೀ ವರ್ಷ್ ಅಲ್ಮ್ಯಾನಾಕ್ ಸಂಸ್ಥೆ  ನಡೆಸುವ ಸಮೀಕ್ಷೆಯಲ್ಲಿ ವಿಶ್ವದ ಬೆಸ್ಟ್ ಕ್ರಿಕೆಟರ್ಸ್ ಐದು ಜನರನ್ನು ಆಯ್ಕೆ ಮಾಡಿ, ಗೌರವಿಸುತ್ತದೆ. ಅದರಂಥೇ ಈ ಬಾರಿ ಆ ಐದು ಕ್ರಿಕೆಟಿಗರು ಯಾರು ಗೊತ್ತಾ…?

ಈ ಸಂಸ್ಥೆ ವಿಶ್ವದ 3 ಕ್ರಿಕೆಟಿಗರ ಹೆಸರಿನ ಪಟ್ಟಿಯನ್ನ ಬಿಡುಗಡೆ ಮಾಡುತ್ತದೆ. ಅದರಂತೇ ಭಾರತೀಯ ಕ್ರಿಕೆಟ್ ತಡದ ನಾಯಕ ವಿರಾಟ್ ಕೊಹ್ಲಿಯ ಹೆಸರನ್ನು ಕೂಡ  ಪ್ರಕಟಿಸಿದೆ.ಟ್ಯಾಮಿ ಬೌಂಟನ್, ಜೋಸ್ ಬಟ್ಲರ್, ಸ್ಯಾಮ್ ಕರ್ರನ್ ಮತ್ತು ರೋರಿ ಬರ್ನ್ಸ್ ಇತರೆ 4 ಆಟಗಾರರಾಗಿದ್ದಾರೆ. ವಿರಾಟ್ ಕೊಹ್ಲಿ 2018 ರಲ್ಲಿ ಗಣನೀಯ ರನ್ ಬಾರಿಸಿ ಗಮನ ಸೆಳೆದಿದ್ದಾರೆ. ಪ್ರತಿ ಮ್ಯಾಚ್ ನಲ್ಲಿಯೂ ಶೇ.68.37 ರನ್ ಸರಾಸರಿಯಂತೆ ಒಟ್ಟು 2735 ರನ್ ಗಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos