ಪ್ರೇಮ್ ಹುಟ್ಟುಹಬ್ಬಕ್ಕೆ ರಚಿತಾ ಗಿಫ್ಟ್

ಪ್ರೇಮ್ ಹುಟ್ಟುಹಬ್ಬಕ್ಕೆ ರಚಿತಾ ಗಿಫ್ಟ್

ಬೆಂಗಳೂರು, ಅ. 23 : ನಿರ್ದೇಶಕ ಜೋಗಿ ಪ್ರೇಮ್, 40ನೇ ವಸಂತಕ್ಕೆ ಕಾಲಿಟ್ಟಿದ್ದು, ಏಕ್ ಲವ್ ಯಾ ಸಿನಿಮಾ ಸೆಟ್ನಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ರಕ್ಷಿತಾ ಪ್ರೇಮ್ ನಿರ್ಮಾಣದ ಏಕ್ಲವ್ ಚಿತ್ರಕ್ಕೆ ಪ್ರೇಮ್ ಆ್ಯಕ್ಷನ್ ಕಟ್ ಹೇಳ್ತಿದ್ದು, ರಕ್ಷಿತಾ ಸಹೋದರ ರಾಣಾ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹ ನಟಿಸ್ತಿದ್ದು, ಸೆಟ್ನಲ್ಲಿ ಪ್ರೇಮ್ ಬರ್ತ್ಡೇ ಆಚರಿಸಿದ್ದಾರೆ. ಈ ವೇಳೆ ರಚ್ಚು ಕುಣಿದು ಸಂಭ್ರಮಿಸಿದ್ದಾರೆ. ಅದರಲ್ಲೂ ರಕ್ಷಿತಾ ಸಖತ್ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ಏಕ್ ಲವ್ ಯಾ’ ಮೂಲಕ ರಕ್ಷಿತಾ ಸಹೋದರ ರಾಣಾ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ರಾಣಾ ನಟನಾ ತರಬೇತಿ ಪಡೆದಿದ್ದಾರೆ. ರಚಿತಾ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ.

ಫ್ರೆಶ್ ನ್ಯೂಸ್

Latest Posts

Featured Videos