ಮಾಜಿ ಸಚಿವ ನಿವಾಸ ಸೇರಿ 22 ಕಡೆ ಎಸಿಬಿ ದಾಳಿ

ಮಾಜಿ ಸಚಿವ ನಿವಾಸ ಸೇರಿ 22 ಕಡೆ ಎಸಿಬಿ ದಾಳಿ

ಲಖನೌ: ಉತ್ತರ ಪ್ರದೇಶದ ಮಾಜಿ ಮಂತ್ರಿ ಗಾಯತ್ರಿ ಪ್ರಜಾಪತಿ ಅವರಿಗೆ ಸೇರಿದ ನಿವಾಸದ ಮೇಲೆ ಸಿಬಿಐ ಬುಧವಾರ ದಾಳಿ ನಡೆಸಿ ಪರರಿಶೀಲನೆ ನಡೆಸಿದ್ದಾರೆ. ಪ್ರಜಾಪತಿ ಅವರು ಪ್ರಸ್ತುತ ಅತ್ಯಾಚಾರ ಪ್ರಕರಣವೊಂದರಲ್ಲಿ ಲಕ್ನೋ ಜೈಲಿನಲ್ಲಿದ್ದಾರೆ. ವಿಧಾನ ಪರಿಷತ್ ಸದಸ್ಯ ರಮೇಶ್ ಚಂದ್ರ ಮಿಶ್ರಾ ಅವರ ಮನೆ ಮೇಲೂ ದಾಳಿ ನಡೆದಿದೆ.

2012-2016ರ ನಡುವೆ ಅಕ್ರಮ ಮರಳುಗಾರಿಕೆ ನಡೆಸಿರುವ ಪ್ರಕರಣ ಕುರಿತಂತೆ 22 ಕ್ಕೂ ಅಧಿಕ ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವರ್ಷ ಜನವರಿಯಲ್ಲಿ ಅಲಹಬಾದ್ ಹೈಕೋರ್ಟ್ ನೀಡಿದ ನಿರ್ದೇಶನದಂತೆ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ.” ಉತ್ತರ ಪ್ರದೇಶ ಮಾಜಿ ಮಂತ್ರಿಗಳಾದ ಪ್ರಜಾಪತಿ ಅವರಿಗೆ ಸೇರಿದ್ದ ಅಮೇಥಿಯಲ್ಲಿನ ಮೂರು ವಸತಿ ಸಮುಚ್ಚಯ ಸೇರಿದಂತೆ ಉತ್ತರ ಪ್ರದೇಶದ 22 ಪ್ರದೇಶಗಳಲ್ಲಿ ಈ ಬೆಳಿಗ್ಗೆ ಸಿಬಿಐ ತಂಡಗಳು ತನಿಖೆ ಆರಂಭಿಸಿವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos