ಗರ್ಭಿಣಿ ಸೋಗಿನಲ್ಲಿ ಗಾಂಜಾ ಸಾಗಾಟ

ಗರ್ಭಿಣಿ ಸೋಗಿನಲ್ಲಿ ಗಾಂಜಾ ಸಾಗಾಟ

ಅರ್ಜೆಂಟೀನಾ, ನ. 16 : ಗರ್ಭಿಣಿ ಸೋಗಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಮಹಿಳೆ ಭದ್ರತಾ ಸಿಬ್ಬಂದಿಗಳು ಬಂಧಿಸಿರುವ ಪ್ರಕರಣ ಅರ್ಜೆಂಟೀನಾ ಬೆಳಕಿಗೆ ಬಂದಿದೆ. ಕಳ್ಳತನ ಮಾಡಲು ಚೋರರು ಇತ್ತೀಚೆಗೆ ನಾನಾ ಮಾರ್ಗಗಳನ್ನು ಕಂಡುಕೊಂಡಿದ್ದಾರೆ, ಗರ್ಭಿಣಿಯೆಂದು ನಾಟಕವಾಡಿ 4 ಕೆಜಿ ಗಾಂಜಾವನ್ನು ಸಾಗಿಸುತ್ತಿದ್ದ ಮಹಿಳೆಯನ್ನು ಗಡಿ ಭದ್ರತಾ ಸಿಬ್ಬಂದಿಗಳು ಬಂಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಗರ್ಭಿಣಿಯ ಸೋಗು ಧರಿಸಿ ಹೊಟ್ಟೆಯಲ್ಲಿ 4 ಕೆಜಿ ಗಾಂಜಾವನ್ನು ಬಸ್ಸಿನಲ್ಲಿ ಸಾಗಿಸುತ್ತಿದ್ದಾಗ ಅರ್ಜೆಂಟೀನಾದ ಗಡಿ ಭಾಗದ ಭದ್ರತಾ ಸಿಬ್ಬಂದಿಗಳು ಅನುಮಾನಗೊಂಡು ಆಕೆಯನ್ನು ಪರಿಶೀಲಿಸಿದಾಗ 15 ಗಾಂಜಾ ಪ್ಯಾಕೇಟ್ಗಳು ಪತ್ತೆಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos