ಪರದೆ ಮೇಲೆ ‘ಒಲವೆ ಮಂದಾರ’ 2!

ಪರದೆ ಮೇಲೆ ‘ಒಲವೆ ಮಂದಾರ’ 2!

ಬೆಂಗಳೂರು, ಜು.8 : 2011ರಲ್ಲಿ ಬಿಡುಗಡೆಯಾಗಿದ್ದ ಒಲವೇ ಮಂದಾರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿತ್ತು. ಇದೇ ಅದೇ ಹೆಸರಿನಲ್ಲಿ ಮತ್ತೊಂದು ಚಿತ್ರ ನಿರ್ಮಾಣ. ಎಸ್ ಆರ್ ಪಾಟೀಲ್ ತಮ್ಮ ಮುಂದಿನ ನಿರ್ದೇಶನದ ಚಿತ್ರಕ್ಕೆ ಒಲವೇ ಮಂದಾರ 2 ಎಂದು ಶೀರ್ಷಿಕೆ ಇಟ್ಟಿದ್ದಾರೆ. ಈ ಚಿತ್ರಕ್ಕೂ ಮೂಲ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರದ ಶೀರ್ಷಿಕೆಯನ್ನು ಮಾತ್ರ ತೆಗೆದುಕೊಂಡಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಚಿತ್ರವನ್ನು ಚೇತನ್ ರಾಜ್ ಮತ್ತು ರಮೇಶ್ ಮಾರ್ಗೋಲ್ ಮತ್ತು ಟಿಎಂ ಸತೀಶ್ ನಿರ್ಮಾಣ ಮಾಡುತ್ತಿದ್ದು 2014ರಲ್ಲಿ ಫೇಸ್ ಆಫ್ ಬೆಂಗಳೂರು ಚಿತ್ರದಲ್ಲಿ ನಟಿಸಿದ್ದ ಸನತ್ ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಲವೇ ಮಂದಾರ 2 ಚಿತ್ರಕ್ಕೆ ಕಿರಣ್ ತೊಟ್ಟಂಬ್ಲೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos