ಪ್ರದರ್ಶನದ ವೇಳೆ ತರಬೇತುದಾರನ ಮೇಲೆ ಸಿಂಹ ದಾಳಿ.!

ಪ್ರದರ್ಶನದ ವೇಳೆ ತರಬೇತುದಾರನ ಮೇಲೆ ಸಿಂಹ ದಾಳಿ.!

ಉಕ್ರೇನ್, . 5, ನ್ಯೂಸ್ ಎಕ್ಸ್ ಪ್ರೆಸ್: ಸರ್ಕಸ್​​ನಲ್ಲಿ ತರಬೇತುದಾರನ ಮೇಲೆ ಸಿಂಹವೊಂದು ದಾಳಿ ಮಾಡಿದ ಶಾಕಿಂಗ್ ಘಟನೆ ಉಕ್ರೇನ್​​ನಲ್ಲಿ ನಡೆದಿದೆ. ಇಲ್ಲಿನ ಲುಂಗಾನ್ಸ್ಕ್​​​​ ಸ್ಟೇಟ್​​ ಸರ್ಕಸ್​​ನಲ್ಲಿ ಪ್ರದರ್ಶನದ ವೇಳೆಯೇ ಸಿಂಹ ದಾಳಿ ನಡೆಸಿದ್ದು, ಪ್ರೇಕ್ಷಕರು ಆತಂಕಕ್ಕಿಡಾಗಿದ್ದಾರೆ. ಪ್ರಖ್ಯಾತ ಟ್ರೈನರ್ ಹಮಾಡಾ ಕೂಟಾ ಸಿಂಹದ ದಾಳಿಗೊಳಗಾದ ವ್ಯಕ್ತಿ.

ಸರ್ಕಸ್ ಪ್ರದರ್ಶನದ ವೇಳೆ ವೇದಿಕೆ ಮೇಲೆ ನಿಂತಿದ್ದ 3-4 ಸಿಂಹಗಳಲ್ಲಿ 1 ಸಿಂಹ ಹಮಾಡಾ ಅವರತ್ತ ಬರುತ್ತದೆ.

ಹಮಾಡಾ ಕೋಲು ಹಿಡಿದು ಸಿಂಹವನ್ನು ಹಿಂದಕ್ಕೆ ಕಳಿಸಲು ಪ್ರಯತ್ನಿಸುತ್ತಾರೆ. ಆದರೆ ಸಿಂಹ ಹಮಾಡಾರನ್ನ ನೆಲಕ್ಕೆ ಉರುಳಿಸುತ್ತದೆ.  ಹಮಾಡಾ ಸಿಂಹವನ್ನು ಹಿಂದಕ್ಕೆ ತಳ್ಳಿ ಮೇಲೇಳುವಲ್ಲಿ ಯಶಸ್ವಿಯಾಗ್ತಾರೆ. ಹಮಾಡಾಗೆ ಹೆಚ್ಚಿನ ಅಪಾಯವೇನೂ ಆಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಅವರು, ಸಿಂಹ ನನ್ನ ಮೇಲೆ ಎಗರಿ, ಕಚ್ಚಿತು. ನನ್ನ ಬೆನ್ನು, ತೋಳು ಹಾಗೂ ಕಾಲಿಗೆ ಸ್ಪಲ್ಪ ಗಾಯವಾಗಿದೆ ಎಂದು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos