ಇಂದು ಮತ್ತು ನಾಳೆ ಸಿಲಿಕಾನ್ ಸಿಟಿಯಲ್ಲಿ ವಿದ್ಯುತ್ ವ್ಯತ್ಯಯ

  • In State
  • September 9, 2023
  • 24 Views
ಇಂದು ಮತ್ತು ನಾಳೆ ಸಿಲಿಕಾನ್ ಸಿಟಿಯಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರು: ಇಂದೂ ಮತ್ತು ನಾಳೆ ಸಿಲಿಕಾನ್ ಸಿಟಿಯಲ್ಲಿ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ವಾರಾಂತ್ಯದಲ್ಲಿ ರಾಜಧಾನಿ ಮಂದಿಗೆ ಬೆಸ್ಕಾಂ ಶಾಕ್ ನೀಡಿದೆ. ವಾರದ ರಜೆ ಅಂತ ಮನೆಯಲ್ಲಿ ಹಾಯಾಗಿ ಇರಬಹುದು ಎಂದುಕೊಂಡಿದ್ದ ಬೆಂಗಳೂರು ನಗರ ವಾಸಿಗರಿಗೆ ವಿದ್ಯುತ್ ವ್ಯತ್ಯಯದ ಬಿಸಿ ತಟ್ಟಲಿದೆ. ಹೌದು ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನಗರದಲ್ಲಿ ಹಲವು ಕಾಮಗಾರಿಗಳನ್ನು ಕೈಗೊಳ್ಳುವುದರಿಂದ ಶನಿವಾರ ಮತ್ತು ಭಾನುವಾರ ಪವರ್ ಕಟ್ ಆಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos