ಬೆಂಗಳೂರಿನ ವಿದ್ಯುತ್ ವ್ಯತ್ಯಯ!

ಬೆಂಗಳೂರಿನ ವಿದ್ಯುತ್ ವ್ಯತ್ಯಯ!

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಪವರ್‌ ಕಟ್‌ ಸಮಸ್ಯೆ ಜನರನ್ನು ಕಾಡಲಿದೆ. ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ ಕೆಲವೆಡೆ ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಕಾರಣ ಈ ವಿದ್ಯುತ್‌ ವ್ಯತ್ಯಯ ನಿಗದಿಯಾಗಿದೆ.

ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ಕಾಮಗಾರಿ ನಡೆಸುವುದರಿಂದ ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಇಂದು ಅಂದರೆ ನವೆಂಬರ್ 30ರಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಬೆಂಗಳೂರು ಉತ್ತರ ವಿಭಾಗದ ಪ್ರದೇಶಗಳಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ ವಿದ್ಯುತ್ ಸಮಸ್ಯೆಯಾಗಲಿದೆ.

ಸಹಕಾರನಗರ ಎ, ಬಿ, ಡಿ, ಇ, ಎಫ್ & ಜಿ ಬ್ಲಾಕ್, ಅಮೃತಹಳ್ಳಿ. ತಲಕಾವೇರಿ ಲೇಔಟ್, BGS ಲೇಔಟ್, ನವ್ಯನಗರ, GKVK ಲೇಔಟ್, ಸಂಪಿಗೆಹಳ್ಳಿ, ಅಗ್ರಹಾರ, ವಿಧಾನಸೌಧ ಲೇಔಟ್, ಸಾಯಿಬಾಬಾ ಲೇಔಟ್. ಕೆಂಪಾಪುರ, ಟೆಲಿಕಾಂ ಲೇಔಟ್, ಸಿಂಗಹಳ್ಳಿ 2ನೇ ಹಂತ, ವೆಂಕಟೇಶ್ವರನಗರ, ಕಳ್ಳಿಪಾಳ್ಯ, ಅತ್ತೂರು ಲೇಔಟ್, ತಿರುಮನಹಳ್ಳಿ, ಯಶೋಧಾನಗರ. ಗೋಪಾಲಪ್ಪ ಲೇಔಟ್, ಆರ್ಎಂಝಡ್ ಅಜೂರು ಲೇಔಟ್, ಬ್ರಿಗೇಡ್ ಕ್ಯಾಲಾಡಿಯಂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಫ್ರೆಶ್ ನ್ಯೂಸ್

Latest Posts

Featured Videos