ಸಿಲಿಕಾನ್‌ ಸಿಟಿಯಲ್ಲಿ ಗುಂಡಿಗಳದ್ದೇ ದರ್ಬಾರ್!

ಸಿಲಿಕಾನ್‌ ಸಿಟಿಯಲ್ಲಿ ಗುಂಡಿಗಳದ್ದೇ ದರ್ಬಾರ್!

ಬೆಂಗಳೂರು: ಮಳೆ ಬಂತೆಂದರೆ ಎಲ್ಲಾರಿಗೂ ಸಂತೋಷ ಮೂಡುತ್ತದೆ. ಆದರೆ ರಾಜ್ಯದ ರಾಜ್ಯಧಾನಿಯಲ್ಲಿ ಮಳೆ ಎಂದರೆ ಬಯ ಮೂಡುತ್ತದೆ. ಏಕೆಂದರೆ ಮಳೆಯಿಂದ ರಸ್ತೆಯಲ್ಲಿನ ಗುಂಡಿಗಳು ಮಳೆಯಿಂದ ಕಾಣುವುದಿಲ್ಲಾ ಇದರಿಂದ ಹೆಚ್ಚು ಅಪಘಾತ ಹೆಚ್ಚಾಗುತ್ತದೆ.

ನಗರದಲ್ಲಿ ರಸ್ತೆ ಗುಂಡಿ ಗಳಿಂದ ಸಾಲು ಸಾಲು ಅಪಘಾತ ಸಂಭವಿಸುತ್ತಿವೆ. ವಾಹನ ಸವಾರರನ್ನ ರಸ್ತೆ ಗುಂಡಿಗಳು ಯಮನಂತೆ ಕಾಡುತ್ತಿವೆ. ಬೆಂಗಳೂರಿನ ಪ್ರಮುಖ ನಗರಗಳ ರಸ್ತೆಗಳು ಗುಂಡಿಗಳಿಂದ ತುಂಬಿವೆ. ಗುಂಡಿಗಳಿಂದ ಜನರ ಪರದಾಡುವಂತಾಗಿದೆ. ನಂದಿನಿ ಲೇಔಟ್​ನಿಂದ ಯಶವಂತ ಪುರ, ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದ ಸುತ್ತಮುತ್ತಲು ಮತ್ತು ಸುಕಂದಕಟ್ಟೆ ರಸ್ತೆ ನಿಲಗೀರಿತೋಪು ಸರ್ಕಲ್​ನಲ್ಲಿ ಯಮ ಸ್ವರೂಪಿ ಗುಂಡಿಗಳು ಬಾಯಿ ತೆರೆದಿವೆ.

ಗುಂಡಿಗಳನ್ನು ತಪ್ಪಿಸಲು ಹೋಗಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಮಳೆ ಬಂದರೆ ರೋಡ್ ಯಾವುದು, ಗುಂಡಿ ಯಾವುದು ಅಂತ ಗೊತ್ತಾಗುವುದಿಲ್ಲ. ಗುಂಡಿ ಇರುವ ಕಾರಣ ಈ ರೋಡ್​ನಲ್ಲಿ ಸ್ಲೋ ಮೂವಿಂಗ್ ಟ್ರಾಫಿಕ್​ ಇರುವುತ್ತದೆ. ಸಾಕಷ್ಟು ವರ್ಷಗಳಿಂದ ಈ ಗುಂಡಿಗಳನ್ನು ಮುಚ್ಚಲು ಮುಂದಾಗಿಲ್ಲ. ಡಾಂಬರೀನಿಂದ ಗುಂಡಿ ಮುಚ್ಚುವ ಬದಲಿಗೆ ಟೈಲ್ಸ್ ಪುಡಿ ಹಾಕಿ ಗುಂಡಿ ಮುಚ್ಚಲಾಗಿದೆ. ಇದರಿಂದ ಧೂಳು ಎದ್ದೇಳುತ್ತಿದೆ. ವಾಹನ ಸವಾರರ ಗೋಳು ಕೇಳುವವರಿಲ್ಲ.

 

ಫ್ರೆಶ್ ನ್ಯೂಸ್

Latest Posts

Featured Videos