ಇಂಡಿಯ ಬುಕ್ ಆಫ್ ರೆಕಾರ್ಡ್ಸ್ಗೆ ಪೋರಿ

ಇಂಡಿಯ ಬುಕ್ ಆಫ್ ರೆಕಾರ್ಡ್ಸ್ಗೆ ಪೋರಿ

ಶಿರಾ: ನಗರದ ವರ್ಧಮಾನ್ ಶಾಲೆಯಲ್ಲಿ ಎಲ್‌ಕೆಜಿ ವ್ಯಾಸಂಗ ಮಾಡುತ್ತಿರುವ ಐದು ವರ್ಷದ ಪೋರಿಯೊಬ್ಬಳು ಇಂಡಿಯ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದು, ಪ್ರತಿಭೆಯನ್ನು ಶಾಲಾಡಳಿತ ಮಂಡಳಿ ಗೌರವಿಸಿದೆ.

ನಗರದ ಶೀಲಾ ಮತ್ತು ಸಂಜಯ್ ದಂಪತಿಯ ಹೆಣ್ಣು ಮಗು ಟಿ.ಎಸ್.ಸಾಶಿ ಹಿಂದೂ ಧರ್ಮದಲ್ಲಿ ಅನುಸರಿಸಲಾಗುವ ೬೦ ಸಂವತ್ಸರಗಳ ಹೆಸರು, ೨೭ ನಕ್ಷತ್ರಗಳು ಮತ್ತು ರಾಶಿಗಳು, ವಾಹನದ ಸಮೇತ ೨೫ ದೇವರುಗಳ ಹೆಸರು ಮತ್ತು ದೇಶದ ೨೮ ರಾಜ್ಯಗಳು ಮತ್ತು ಅವುಗಳ ರಾಜಧಾನಿಗಳನ್ನು ಒಳಗೊಂಡ ವಿವರವನ್ನು ಒಂದೂಕಾಲು ನಿಮಿಷದಲ್ಲಿ ಪಟಪಟನೆ ಹೇಳುವ ಮೂಲಕ ೨೦೨೦ನೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದಾಳೆ.
ಮಗುವಿನ ಸಾಧನೆ ಹಿಂದಿರುವ ಏಕಾಗ್ರತೆ, ಪೋಷಕರ ಶ್ರಮ ಗುರ್ತಿಸಿ ಶಾಲಾಡಳಿತ ಮಂಡಳಿಯಿಂದ ಬುಧವಾರ ಬಾಲ ಪ್ರತಿಭೆಯನ್ನು ಗೌರವಿಸಲಾಯಿತು. ಶಾಲೆಯ ಅಧ್ಯಕ್ಷ ಸಂಜಯ್ ಎಸ್.ಗೌಡ, ನಿರ್ದೇಶಕ ಸಂಪತ್ ರಾಜ್, ಶಿಕ್ಷಕರಾದ ಸುಭಾಷಿಣಿ, ದಿವ್ಯವಾಣಿ, ಸಂಗೀತಾ, ರಮ್ಯ, ಓಬರಾಜು ಮೊದಲಾದವರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos