ಬಡ್ಡಿ ಸಾಲಕ್ಕೆ ಬೇಸತ್ತ ಬಡ ಕುಟುಂಬ

ಬಡ್ಡಿ ಸಾಲಕ್ಕೆ ಬೇಸತ್ತ ಬಡ ಕುಟುಂಬ

ಧಾರವಾಡ, ಜ. 30:  ಬಡ್ಡಿ ಸಾಲಕ್ಕೆ ಬೇಸತ್ತು ಕುಟುಂಬ ಸಮೇತ ಅಳುತ್ತಾ ಬಂದ ಬಡ ಕುಟುಂಬವೊಂದು ಎಸಿ ಕಚೇರಿ ಕದ ತಟ್ಟಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿಯ ನಿವಾಸಿ ಶರಣಬಸಪ್ಪ ವೆಂಕಟಾಪೂರ ಕುಟುಂಬವೇ ಮೀಟರ್ ಬಡ್ಡಿ ಮಾಫೀಯಾ ಹೊಡೆತಕ್ಕೆ ನಲುಗಿ ಹೋಗಿದೆ. ಹೀಗಾಗಿ ತಮಗೆ ನ್ಯಾಯ ಕೊಡಿಸಬೇಕು ಎಂದು ಧಾರವಾಡ ಉಪ ವಿಭಾಗಾಧಿಕಾರಿ ಕಚೇರಿ ಎದುರು ಬಂದು ಅಳುತ್ತ ನಿಂತಿರುವ ಶರಣಬಸಪ್ಪ ಕುಟುಂಬ, ಇಬ್ಬರು ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಬಂದ ಕುಟುಂಬ.

ಶೇಕಡಾ 10 ರಷ್ಟು ಬಡ್ಡಿ ಹಣ ನಿಡಬೇಕು ಎಂದು ಪುರದಪ್ಪ ದಳವಾಯಿ ಅವಾಜ್ ಹಾಕಿದ್ದಾರೆ ಎಂಬುದು ಅವರ ಆರೋಪವಾಗಿದೆ. 1,35 ಸಾವಿರ ಸಾಲ ಪಡೆದುಕೊಂಡಿದ್ದ ಶರಣಬಸಪ್ಪ ಕುಟುಂಬಸ್ಥರು ಸಾಲದ ಬಾಧೆ ತಾಳದೆ ಒಂದಾಗುತ್ತಿದ್ದಾರೆ.

ಸದ್ಯ ಮೂರು ಲಕ್ಷ ಕೊಡು ಇಲ್ಲವೇ ಮನೆ ಖಾಲಿ ಮಾಡು ಎಂದು ಅವಾಜ್ ಹಾಕಿದ್ದಾನೆ ಎಂದು ಅಳಲು ತೊಡಿಕೊಂಡಿದ್ದಾನೆ. ಶರಣಬಸಪ್ಪ ಅನಾರೋಗ್ಯದಿಂದ ಕೆಲಸಕ್ಕೆ ಹೋಗದೆ, ಕಳೆದ 6 ತಿಂಗಳಿಂದ ಬಡ್ಡಿ ಕಟ್ಟಿಲ್ಲ, ಹೀಗಾಗಿ ಹಣ ಮರಳಿಸುವಂತೆ ಒತ್ತಡ ಹೇರಿದ್ದರಿಂದ ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ನಮಗೆ ನ್ಯಾಯ ಕೊಡಿಸಿ ಎಂದು ಧಾರವಾಡ ಎಸ್ಪಿ ಮೊರೆ ಹೋದ ಶರಣಬಸಪ್ಪ ಕುಟುಂಬ ಉಪವಿಭಾಗಾಧಿಕಾರಿ (ಎಸಿ) ಅವರ ಮೊರೆ ಹೋಗಿದೆ.

ಈ ಕುರಿತು ಅಣ್ಣಿಗೇರಿ ಪೋಲಿಸರಿಗೆ ದೂರು ನೀಡಿದರೂ ಅವರು ಕ್ಯಾರೆ ಅನ್ನದಕ್ಕೆ ಇದೀಗ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶರಣಬಸಪ್ಪ ಕುಟುಂಬಕ್ಕೆ  ನ್ಯಾಯ ನೀಡುತ್ತಾ ಎಂಬುದು ಕಾದು ನೋಡಬೇಕಿದೆ.

ಫ್ರೆಶ್ ನ್ಯೂಸ್

Latest Posts

Featured Videos