ಪೊಲ್ಲಾಚಿ ‘ಕಾಮ ಪಿಶಾಚಿ’ಗಳಿಂದ 50ಕ್ಕೂ ಹೆಚ್ಚು ಮಹಿಳೆಯರ ಅತ್ಯಾಚಾರ!?

  • In Crime
  • March 16, 2019
  • 761 Views
ಪೊಲ್ಲಾಚಿ ‘ಕಾಮ ಪಿಶಾಚಿ’ಗಳಿಂದ 50ಕ್ಕೂ ಹೆಚ್ಚು ಮಹಿಳೆಯರ ಅತ್ಯಾಚಾರ!?

ಮಾ.16, ನ್ಯೂಸ್ ಎಕ್ಸ್ ಪ್ರೆಸ್: ಕೆಲ ದಿನಗಳ ಹಿಂದೆ ಹತ್ತೊಂಬತ್ತು ವರ್ಷದ ಪೊಲ್ಲಾಚಿಯ ಕಾಲೇಜು ವಿದ್ಯಾರ್ಥಿನಿಗೆ ಒಂದು ಫೋನ್ ಕರೆ ಬಂದಿತ್ತು. ಶಬರಿರಾಜನ್ ಅಲಿಯಾಸ್ ರಿಷ್ವದ್ ಎಂಬಾತ, ನಿನ್ನ ಜತೆ ಮುಖ್ಯವಾದ ವಿಷಯ ಮಾತನಾಡಬೇಕು. ಪೊಲ್ಲಾಚಿಯ ಬಸ್ ಸ್ಟಾಪ್ ಹತ್ತಿರ ಬಾ ಎಂದು ಕರೆದಿದ್ದ. ಅಂದು ಮಧ್ಯಾಹ್ನ ಆಕೆ ಅಲ್ಲಿಗೆ ತಲುಪುವ ಹೊತ್ತಿಗೆ ಶಬರಿರಾಜನ್ ಜತೆಗೆ ಆತನ ಮತ್ತೊಬ್ಬ ಸ್ನೇಹಿತ ತಿರುನಾವುಕ್ಕರಸು ಒಂದು ಕಾರಿನ ಬಳಿ ನಿಂತಿದ್ದರು. ಹಾಗೇ ಹೋಗುತ್ತಾ ದಾರಿಯಲ್ಲಿ ಮಾತನಾಡೋಣ. ನೀನು ಕಾರು ಹತ್ತು ಎಂದು ಇಬ್ಬರೂ ಸೇರಿ ಆಕೆಯನ್ನು ವಾಹನದೊಳಗೆ ಕೂರಿಸಿಕೊಂಡಿದ್ದಾರೆ. ತಿರುನಾವುಕ್ಕರಸು ಕಾರನ್ನು ಚಲಾಯಿಸುವುದಕ್ಕೆ ಮುಂದೆ ಕೂತರೆ, ಶಬರಿರಾಜನ್ ಆಕೆಯ ಪಕ್ಕದಲ್ಲಿ ಕೂತಿದ್ದಾನೆ. ದಿಢೀರನೇ ಸತೀಶ್ ಮತ್ತು ವಸಂತ್ ಕುಮಾರ್ ಎಂಬಿಬ್ಬರು ಸಹ ಕಾರಿನ ಒಳಗೆ ಬಂದಿದ್ದಾರೆ. ಕೇರಳದಲ್ಲಿ ಮತ್ತೆ ಬುಸುಗುಟ್ಟಿದ ರಾಜಕಾರಣಿಗಳ ‘ಸೆಕ್ಸ್ ಸ್ಕ್ಯಾಂಡಲ್’ ನಾಲ್ವರೂ ಸೇರಿ ಬಲವಂತವಾಗಿ ಆ ಯುವತಿಯ ಬಟ್ಟೆಗಳನ್ನು ತೆಗೆದು, ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಆಕೆಯ ಬಳಿಯಿದ್ದ ಚಿನ್ನದ ಸರ ಕಸಿದುಕೊಂಡಿದ್ದಾರೆ. ನಾವು ಕೇಳಿದಾಗ ಹಣ ಕೊಡದಿದ್ದರೆ, ಲೈಂಗಿಕ ಸಂಪರ್ಕಕ್ಕೆ ಒಪ್ಪದಿದ್ದರೆ ಈ ವಿಡಿಯೋವನ್ನು ಇಂಟರ್ ನೆಟ್ ನಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ. ಆಕೆ ಜೋರಾಗಿ ಕಿರುಚಾಡಿದಾಗ ಹಾಗೂ ಅಳಲು ಆರಂಭಿಸಿದಾಗ ದಾರಿಯ ಮಧ್ಯದಲ್ಲೇ ಬಿಟ್ಟು, ಕಾರಿನಲ್ಲಿ ಹೊರಟುಹೋಗಿದ್ದಾರೆ.

ಈ ಘಟನೆಯಿಂದ ಕಂಗಾಲಾದ ಯುವತಿ ತನ್ನ ಕುಟುಂಬದವರ ಬಳಿ ಕೂಡ ವಿಚಾರವನ್ನು ಹೇಳಿಕೊಂಡಿಲ್ಲ. ಆದರೆ ಯಾವಾಗ ಈ ನಾಲ್ವರು ಸೇರಿ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಾ, ಹಲವು ಸಲ ಹಣಕ್ಕಾಗಿ ಒತ್ತಾಯಿಸಿದರೋ ಆಗ ಕುಟುಂಬದವರ ಬಳಿ ಆಗಿದ್ದನ್ನೆಲ್ಲ ಹೇಳಿಕೊಳ್ಳಲು ಯುವತಿ ನಿರ್ಧರಿಸಿದ್ದಾಳೆ. ಆ ಯುವತಿಯ ಸೋದರ ಆ ನಂತರ ತಿರುನಾವುಕ್ಕರಸು ಮತ್ತು ಶಬರಿರಾಜನ್ ನನ್ನು ಪತ್ತೆ ಮಾಡಿ, ಚೆನ್ನಾಗಿ ತದುಕಿದ ಮೇಲೆ ಭಯಾನಕವಾದ ಲೈಂಗಿಕ ಹಿಂಸೆ ಮತ್ತು ಹಫ್ತಾ ವಸೂಲಿ ದಂಧೆ ಬೆಳಕಿಗೆ ಬಂದಿದೆ. ಅವರಿಬ್ಬರ ಬಳಿ ಇದ್ದ ಮೊಬೈಲ್ ಫೋನ್ ಪರಿಶೀಲಿಸಿದಾಗ ಮತ್ತೂ ಮೂವರು ಮಹಿಳೆಯರ ವಿಡಿಯೋ ಪತ್ತೆಯಾಗಿದೆ. ಅವರನ್ನೂ ಬ್ಲ್ಯಾಕ್ ಮೇಲ್ ಮಾಡುತ್ತಿದ್ದುದು ಗೊತ್ತಾಗಿದೆ. ಆಗ ಈ ಯುವತಿಯ ಕುಟುಂಬದವರು ಪೊಲ್ಲಾಚಿ ಪೊಲೀಸರ ಬಳಿ ಲೈಂಗಿಕ ದೌರ್ಜನ್ಯ ಮತ್ತು ದರೋಡೆ ಪ್ರಕರಣ ದಾಖಲಿಸಿದ್ದಾರೆ. ಈ ಒಂದು ಪ್ರಕರಣದ ಬೆನ್ನಿಗೆ ಶಬರಿರಾಜನ್, ತಿರುನಾವುಕ್ಕರಸು, ಸತೀಶ್ ಹಾಗೂ ವಸಂತ್ ಕುಮಾರ್ ನಾಲ್ವರು ಇತರರ ಜತೆ ಸೇರಿ ಇಂಥದ್ದೇ ದೊಡ್ಡ ದಂಧೆ ನಡೆಸುತ್ತಿರುವ ಬಗ್ಗೆ ಗುಮಾನಿ ಬಂದಿದೆ. ಪೊಲೀಸರು ಅವರಿಗಾಗಿ ತನಿಖೆ ನಡೆಸುತ್ತಿದ್ದಾರೆ.

ಇಬ್ಬರು ಆರೋಪಿಗಳ ಮೊಬೈಲ್ ಫೋನ್ ನಿಂದ ಮೂರು ವಿಡಿಯೋ ವಶಕ್ಕೆ ಪಡೆದಿದ್ದಾರೆ. ಮಾಧ್ಯಮದ ವರದಿ ಹಾಗೂ ಅಂದಾಜಿನ ಪ್ರಕಾರ ಐವತ್ತರಿಂದ ಇನ್ನೂರು ಮಂದಿ ಈ ಜಾಲದಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ಈ ಸಂಖ್ಯೆ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಈ ವರೆಗೆ ಸೋರಿಕೆ ಆಗಿರುವ ವಿಡಿಯೋದಲ್ಲಿ ಕನಿಷ್ಠ ಆರು ಮಹಿಳೆಯರು ಇದ್ದಾರೆ. ವಿಧಿವಿಜ್ಞಾನ ಇಲಾಖೆಯಿಂದ ವರದಿ ಬಂದ ನಂತರವೇ ಉಳಿದಿದ್ದರ ಬಗ್ಗೆ ಮಾಹಿತಿ ಸಿಗಬೇಕು. ಆರೋಪಿ ತಿರುನಾವುಕ್ಕರಸು ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾನೆ. ಈ ಮಧ್ಯೆ ನಾಲ್ವರು ಆರೋಪಿಗಳ ಜತೆಗೆ ಐದನೇ ವ್ಯಕ್ತಿ- ಎಐಎಡಿಎಂಕೆ ಪದಾಧಿಕಾರಿಯಾಗಿದ್ದ ‘ಬಾರ್’ ನಾಗರಾಜ್ ಎಂಬಾತನ ಹೆಸರನ್ನೂ ಪೊಲೀಸರು ಸೇರಿಸಿದ್ದಾರೆ. ಆತನನ್ನು ಸದ್ಯಕ್ಕೆ ಆ ಪಕ್ಷದಿಂದ ಉಚ್ಚಾಟಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos