ಮುಲಾಯಂ ಸಿಂಗ್ ಸೊಸೆ ಡಿಂಪಲ್ ವಿರುದ್ದ ಅಭ್ಯರ್ಥಿ ಕಣಕ್ಕಿಳಿಸಿದ ಶಿವಪಾಲ್ ಯಾದವ್

ಮುಲಾಯಂ ಸಿಂಗ್ ಸೊಸೆ ಡಿಂಪಲ್ ವಿರುದ್ದ ಅಭ್ಯರ್ಥಿ ಕಣಕ್ಕಿಳಿಸಿದ ಶಿವಪಾಲ್ ಯಾದವ್

ಲಕ್ನೋ, ಮಾ.28, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಕ್ಷೇತ್ರ ಕನೌಜ್ ಸಮಾಜವಾದಿ ಪಕ್ಷದ ಹಾಲಿ ಸಂಸದೆ ಡಿಂಪಲ್ ಯಾದವ್ ವಿರುದ್ಧ ತನ್ನ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಪ್ರಗತಿಶೀಲ ಸಮಾಜವಾದಿ ಪಕ್ಷದ ಮುಖ್ಯಸ್ಥ ಶಿವಪಾಲ್ ಯಾದವ್ ತಿಳಿಸಿದ್ದಾರೆ.

ಡಿಂಪಲ್ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪತ್ನಿಯಾಗಿದ್ದು, ಅಖಿಲೇಶ್, ಶಿವಪಾಲ್ ಯಾದವ್ ಗೆ ಅಳಿಯನಾಗಿದ್ದಾರೆ.

ಪ್ರಗತಿಶೀಲ ಸಮಾಜವಾದಿ ಪಕ್ಷ ಮಾ.27ರಂದು 10 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮುಲಾಯಂ ಸಿಂಗ್ ಸೊಸೆ ಡಿಂಪಲ್ ವಿರುದ್ಧ ಸುನೀಲ್ ಕುಮಾರ್ ಸಿಂಗ್ರನ್ನು ಅಭ್ಯರ್ಥಿನ್ನಾಗಿಸಲಾಗಿದೆ.

ಶಿವಪಾಲ್ ಈಗಾಗಲೇ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮಗೋಪಾಲ್ ಯಾದವ್ರ ಪುತ್ರ ಅಕ್ಷಯ್ ಯಾದವ್ ವಿರುದ್ಧ ಫಿರೋಝಾಬಾದ್ ಕ್ಷೇತ್ರಕ್ಕೆ ತಮ್ಮದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos